ಮೆಟ್ರೋ ನಿಲ್ದಾಣದಲ್ಲಿ ಮಿನಿ ಶಾಪಿಂಗ್ ಮಾಲ್

ಶನಿವಾರ, 5 ಮಾರ್ಚ್ 2022 (16:46 IST)
ನಮ್ಮ ಮೆಟ್ರೋ ನಿಲ್ದಾಣಗಳು ಈಗ ಶಾಪಿಂಗ್ ಸ್ಪಾಟ್ ಆಗಿ ಪರಿವರ್ತನೆಯಾಗಲಿವೆ. ವಿದೇಶಿ ಮಾದರಿಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಮಿನಿ ಶಾಪಿಂಗ್ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆಸಲಾಗಿದ್ದು, ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿ ಮಳಿಗೆಗಳು ಆರಂಭವಾಗಲಿವೆ.
ನಮ್ಮ ಮೆಟ್ರೋ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ನಗರದ ಮೆಟ್ರೋ ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್, ಸ್ಟೇಷನರಿ ಅಂಗಡಿ, ಸಲೂನ್ ಸೇರಿದಂತೆ ವಿವಿಧ ಶಾಪಿಂಗ್ ಮಾಲ್‍ಗಳನ್ನು ಪ್ರಾರಂಭಿಸಲು ಮುಂದಾಗಿದೆ.
 
ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಕೂಡ ಪಡೆದುಕೊಂಡಿದೆ. ಮಿನಿ ಶಾಪಿಂಗ್ ಮಳಿಗೆಗಳನ್ನು ಪ್ರಾರಂಭಿಸಲು ಬಿಎಂಆರ್‌ಸಿಎಲ್‌ ಟೆಂಡರ್ ಕೂಡ ಆಹ್ವಾನ ಮಾಡಿದೆ. ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಪ್ರತಿ ನಿಲ್ದಾಣಗಳಿಗೂ ಸಾವಿರಾರು ಜನ ಬಂದು ಹೋಗುತ್ತಾರೆ.
 
ಈ ಸಂದರ್ಭದಲ್ಲಿ ಶಾಪಿಂಗ್ ಮಾಲ್‍ಗಳನ್ನು ಮಾಡಿದರೆ ಜನರಿಗೂ ಅನುಕೂಲವಾಗುತ್ತದೆ. ಮೆಟ್ರೋಗೂ ಲಾಭ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಮೆಟ್ರೋ ನಿಲ್ದಾಣಗಳ ಕೆಳಗೆ ಖಾಲಿ ಇರುವ ಜಾಗದಲ್ಲಿ ಈಗ ಮಿನಿ ಅಂಗಡಿಗಳು ತಲೆ ಎತ್ತಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ