ಇಂದಿನಿಂದ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

geetha

ಮಂಗಳವಾರ, 9 ಜನವರಿ 2024 (18:40 IST)
ಬೆಂಗಳೂರು-ಶಿಕ್ಷಣ ಕೊಡದೆ ಮಕ್ಕಳ ಭವಿಷ್ಯದ ಜೊತೆ ಬಿಬಿಎಂಪಿ ಹಾಗೂ ಸರ್ಕಾರ ಚೆಲ್ಲಾಟವಾಡ್ತಿದೆ.ಪರೀಕ್ಷೆ ಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗ ಶಿಕ್ಷಕರನ್ನ ಗುತ್ತಿಗೆ ಯಿಂದ ಔಟ್ ಮಾಡಲಾಗುತ್ತೆ.೭೬೪ ಶಿಕ್ಷಕರನ್ನ ಕೆಲಸದಿಂದ ಬಿಬಿಎಂಪಿ ಕೈಬಿಟ್ಟಿದೆ.ಬಿಬಿಎಂಪಿಯ ನಡೆಯಿಂದ ಪಾಲಿಕೆ ಮಕ್ಕಳು ಶಿಕ್ಷಕರು ಇಲ್ದೆ ಅನಾಥವಾಗಿದೆ.
 
ಪಾಲಿಕೆ ಶಾಲಾ ಕಾಲೇಜುಗಳಲ್ಲಿ ಸುಮಾರು ೨೫ ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ.ಒಂದನೇ ಕ್ಲಾಸ್ ನಿಂದ ಎರಡನೇ ಪಿಯುಸಿ ವರೆಗೆ ಹೊರ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಶಿಕ್ಷಕರನ್ನ ಕೆಲಸದಿಂದ ವಜಾ ಮಾಡಲಾಗುತ್ತದೆ.ಪರೀಕ್ಷೆ ಸಮಯದಲ್ಲಿ ಶಿಕ್ಷಕರನ್ನು ಕೈಬಿಟ್ಟಿದು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಆತಂಕ ಉಂಟುಮಾಡಿದೆ.
 
ವಜಾ ಮಾಡಿದ ಶಿಕ್ಷಕರಿಂದ ಇಂದು ಪ್ರತಿಭಟನೆ ನಡೆಸ್ತಿದ್ದಾರೆ.ನಗರದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟವಾದಿ ಪ್ರತಿಭಟನೆ ನಡೆಯುತ್ತಿದೆ.ಇಂದಿನಿಂದ ಬಿಬಿಎಂಪಿ ಶಾಲಾ. ಕಾಲೇಜುಗಳಲ್ಲಿ ಪಾಠ .ಪ್ರವಚನ ಇಲ್ಲ.ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆ ಶಿಕ್ಷಕರ ಕಿತ್ತಾಟದಿಂದ  ಬಿಬಿಎಂಪಿ ಶಾಲಾ ಕಾಲೇಜುಗಳ ಮಕ್ಕಳ ಬೀದಿಗೆ ಬಂದಿದ್ದಾರೆ.ಹೀಗಾಗಿ ಗುತ್ತಿಗೆ ಶಿಕ್ಷಕರನ್ನು ಕೈಬಿಟ್ಟ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ.
 
ಮಾರ್ಚ್ ತಿಂಗಳಲ್ಲಿ S S L C  ಪರೀಕ್ಷೆ ಇದೆ.ಪರೀಕ್ಷೆಗೆ ತಯಾರು ಅಗಬೇಕಿದ ಮಕ್ಕಳಿಗೆ ಶಿಕ್ಷಣ ಕೊಡೋದಕ್ಕೆ ಶಿಕ್ಷಕರು ಇಲ್ದೆ ಮಕ್ಕಳು ಅನಾಥರಾಗಿದ್ದಾರೆ.ಕೆಲಸ ಖಾಯಂ ಮಾಡುವವರೆಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದು,ನಾವು ಪಾಠ ಮಾಡಲ್ಲ..ಪ್ರತಿಭಟನೆ ಹಿಂಪಡೆಯಲ್ಲ ಎಂದು ಬಿಬಿಎಂಪಿ ಗುತ್ತಿಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ