ಬದುಕಿದ್ದಾಗಲೇ ಶ್ರದ್ಧಾಂಜಲಿ ಸಲ್ಲಿಸಿದ ಗೆಳೆಯರು

ಶನಿವಾರ, 23 ಮೇ 2020 (18:16 IST)
ಸ್ನೇಹಿತನ ಭಾವಚಿತ್ರ ನೋಡಿದ ಗೆಳೆಯರು ಸುಳ್ಳು ಸುದ್ದಿಯನ್ನು ನಂಬಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಕಲಿ ಇನ್ ಸ್ಟಾಗ್ರಾಂ ಅಕೌಂಟ್ ಬಳಸಿ ವಿದ್ಯಾರ್ಥಿಯೊಬ್ಬನ ಫೋಟೋ ಬಳಸಿ ರೆಸ್ಟ್ ಇನ್ ಪೀಸ್ ಎಂದು ಬರೆಯಲಾಗಿದೆ. ಇದನ್ನು ನೋಡಿದ ಕೆಲವು ಗೆಳೆಯರು ತಮ್ಮ ಸ್ನೇಹಿತ ಸಾವನ್ನಪ್ಪಿರಬಹುದೆಂದು ಭಾವಿಸಿ ಇನ್ ಸ್ಟಾಗ್ರಾಂನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಆದರೆ ಫೋನ್ ಮಾಡಿ ನೋಡಿದಾಗ ಸತ್ತಿದ್ದಾನೆ ಎಂದು ತಿಳಿದಿದ್ದ ವಿದ್ಯಾರ್ಥಿ ಬದುಕಿದ್ದನು. ಹೀಗಾಗಿ ಸುಳ್ಳು ಹರಡಿದವರ ವಿರುದ್ಧ ಬೆಂಗಳೂರಿನ ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ