ಇನ್ ಸ್ಟಾಗ್ರಾಂ ಲೈವ್ ನಲ್ಲಿ ವೈಯಕ್ತಿಕ ವಿಚಾರಕ್ಕೆ ಕಣ್ಣೀರು ಹಾಕಿದ ಜೊತೆ ಜೊತೆಯಲಿ ನಾಯಕಿ ಅನು ಸಿರಿಮನೆ

ಗುರುವಾರ, 27 ಫೆಬ್ರವರಿ 2020 (09:52 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೆನ್ಷೇಷನ್ ಸೃಷ್ಟಿಸಿದ್ದ ಜೊತೆ ಜೊತೆಯಲಿ ಧಾರವಾಹಿ ನಾಯಕಿ ಪಾತ್ರಧಾರಿ ಅನು ಸಿರಿ ಮನೆ ಅಲಿಯಾಸ್ ಮೇಘಾ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಇದುವರೆಗೆ ಯಾರಿಗೂ ತಿಳಿಯದ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.


ನಿನ್ನೆ ಇನ್ ಸ್ಟಾಗ್ರಾಂ ಲೈವ್ ಬಂದಿದ್ದ ಮೇಘಾ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ 13 ವರ್ಷಗಳ ಹಿಂದೆ ತೀರಿಕೊಂಡಿದ್ದ ತಮ್ಮ ಅಣ್ಣ ಯಶವಂತ ಶೆಟ್ಟಿ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಡಾ. ರಾಜ್ ಕುಮಾರ್ ತೀರಿಕೊಂಡಾಗ ನಡೆದಿದ್ದ ಗಲಾಟೆಯಲ್ಲಿ ತಮ್ಮ ಅಣ್ಣ ತೀರಿಕೊಂಡಿದ್ದರು. ಆಗ ನಾನು ಚಿಕ್ಕವಳಿದ್ದೆ. ಆದರೆ ಈಗಲೂ ನಾನು ಅವನನ್ನು ಮಿಸ್ ಮಾಡಿಕೊಳ‍್ಳುತ್ತೇನೆ. ಯಾಕೆಂದರೆ ಅವನು ನನಗೆ ಎಲ್ಲರಿಗಿಂತ ಹೆಚ್ಚು ಇಷ್ಟವಾದ ವ್ಯಕ್ತಿಯಾಗಿದ್ದ. ಈ ವಿಚಾರವನ್ನು ನಾನು ಇದುವರೆಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಈವತ್ತು ಯಾಕೋ ಅವನು ನೆನಪಾದ ಎನ್ನುತ್ತಾ ಮೇಘಾ ಕಣ್ಣೀರು ಹಾಕಿದ್ದಾರೆ. ಜತೆಗೆ ತಮ್ಮ ಜೀವನದ ದುಃಖಕರ ಸನ್ನಿವಶೇಷವೊಂದನ್ನು ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ