`ಭಾರತರತ್ನ’ಕ್ಕಾಗಿ ಶ್ರೀಗಳು ಮಾತು ಬದಲಿಸಿದ್ದಾರೆ: ಮಾತೆ ಮಹಾದೇವಿ
ಬಾಗಲಕೋಟೆ: ಸಿದ್ದಗಂಗಾ ಶ್ರೀಗಳು `ಭಾರತರತ್ನ’ಕ್ಕಾಗಿ ಮಾತು ಬದಲಿಸಬಾರದು ಎಂದು ಶ್ರೀಗಳ ವಿರುದ್ಧ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶ್ರೀಗಳು ಕೇವಲ ಪ್ರಶಸ್ತಿಗಾಗಿ ಸ್ವಾಮೀಜಿ ಮಾತು ತಿರುಗಿಸಬಾರದು. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಿಸುವ ಆಮಿಷ ಒಡ್ಡಲಾಗಿದೆ. ಭಾರತರತ್ನ ಆಮಿಷದ ಕುರಿತು ಖಚಿತ ಮಾಹಿತಿ ಬಂದಿದೆ. ಶೀಘ್ರದಲ್ಲಿಯೇ ನಾವು ಇದನ್ನು ಸಾಬೀತು ಮಾಡುತ್ತೇವೆ ಎಂದು ಮಾತೆ ಮಹಾದೇವಿ ಹೇಳಿದ್ದಾರೆ.