ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಕಾನೂನು ಬಾಹಿರ ಆದೇಶ ವಾಪಸ್ ಪಡೆದಿದ್ದೇವೆ ಅಂದಿದ್ದಾರೆ.ಇದು ವಾಸ್ತವಿಕ ಅಂಶ ಅಲ್ಲ.ಡಿಕೆಶಿ ಅವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ನಿರ್ಧಾರ ತಗೊಂಡಿದ್ದಾರೆ.ನಾವು ಎಜಿ ಅಭಿಪ್ರಾಯ ಪಡೆದೇ ಸಿಬಿಐಗೆ ಪ್ರಕರಣ ಕೊಟ್ಟಿದ್ದೆವು.ಅಧಿವೇಶನದಲ್ಲಿ ಇನ್ನಷ್ಟು ದಾಖಲೆಗಳನ್ನು ಇಟ್ಟು ಇದರ ಬಗ್ಗೆ ಚರ್ಚೆ ಮಾಡ್ತೇವೆ.ಡಿಕೆಶಿ ಇದನ್ನು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ರು.ಹೈಕೋರ್ಟ್ ಇದನ್ನು ತಳ್ಳಿ ಹಾಕಿತ್ತು.ಡಿಕೆಶಿ ಅವರನ್ನು ಸಿಬಿಐ ಕೇಸ್ ನಿಂದ ರಕ್ಷಿಸಲು ಈ ನಿರ್ಧಾರ ತಗೊಂಡಿದ್ದಾರೆ.
ಸಿದ್ದರಾಮಯ್ಯ ಮಾಡಿದ ಕೆಲಸ ಅಕ್ಷಮ್ಯ ಅಪರಾಧ.ಕಾನೂನು ಬಾಹಿರವಾಗಿ ಡಿಕೆಶಿ ಉಳಿಸಲು ಈ ಕೆಲಸವನ್ನು ಸಿಎಂ ಮಾಡಬಾರದಾಗಿತ್ತು.ಈಗಲಾದರೂ ಸರ್ಕಾರ ತನ್ನ ನಿರ್ಣಯ ವಾಪಸ್ ಪಡೆಯಲಿ,ರಾಜ್ಯದ ಜನ ಇದನ್ನು ಕ್ಷಮಿಸಲ್ಲ.ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.