ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ನೀಡುವ ಮೊದಲು, ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ, ಆತನನ್ನು ತನಿಖೆ ಮಾಡುತ್ತಿದ್ದರೆ ಇಂದು ಕೋಟ್ಯಂತರ ಭಕ್ತರಿಗಾದ ನೋವನ್ನು ತಪ್ಪಿಸಬಹುದಿತ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಧರ್ಮಸ್ಥಳದ ವಿಚಾರವಾಗಿ ಹಲವು ಆರೋಪಗಳಲ್ಲಿ ಬಯಲಾಗುತ್ತಿರುವ ಒಂದೊಂದು ಸತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಗತಿಪರರ ಮಾತನ್ನು ಕೇಳಿಕೊಂಡು ಸಿಎಂ ಅವರು ತರಾತುರಿಯಲ್ಲಿ ಎಸ್‌ಐಟಿಗೆ ನೀಡಿದರು.
ಮಾಸ್ಕ್‌ಮ್ಯಾನ್ ಬಗ್ಗೆ ಪೂರ್ವಪರ ತಿಳಿದುಕೊಂಡು ಅವರ ಹಿಂದಿರುವವರು ಯಾರೆಂದು ತಿಳಿದುಕೊಳ್ಳಬೇಕಿತ್ತು. ಸಿಎಂ ತೆಗೆದುಕೊಂಡ ನಿರ್ಧಾರದಿಂದ ಕೋಟ್ಯಂತರ ಹಣ ವ್ಯರ್ಥವಾಗುವುದರ ಜತೆಗೆ, ಕೋಟ್ಯಂತರ ಭಕ್ತರ ಭಾವನೆಗೆ ನೋವು ಉಂಟು ಮಾಡಿದೆ ಎಂದರು.