ಸಿದ್ದರಾಮಯ್ಯ ಸಿಎಂ ಆಗೋಕೆ ಸಾಧ್ಯನೇ ಇಲ್ಲ. ಹೀಗಂತ ತಂದೆ ವಿಶ್ವನಾಥ್ ರಂತೆ ಸಿದ್ದು ವಿರುದ್ಧ ಗುಡುಗಿದ್ದಾರೆ ಅಮಿತ್ ದೇವರಹಟ್ಟಿ.
ನಮ್ಮ ತಂದೆ ಮೇಲೆ ಸಿದ್ದರಾಮಯ್ಯಗೆ ಇನ್ನೂ ಕೂಡಾ ಸಿಟ್ಟು, ಕೋಪವಿದೆ. ಈಗಾಗಿಯೇ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಡೆಗಣಿಸಿ ದೂರವಿರಿಸಿದ್ದಾರೆ. ಈ ಅವಧಿಯಲ್ಲಿ ಸಿಎಂ ಆಗೋಕೆ ಸಿದ್ದರಾಮಯ್ಯಗೆ ಸಾಧ್ಯವಿಲ್ಲ ಎಂದಿದ್ದಾರೆ.
ಈ ವಯಸ್ಸಿನಲ್ಲೂ ನಮ್ಮ ತಂದೆಯ ಮನಸ್ಸು ನೋಯಿಸಿರುವುದು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಜಿ.ಟಿ.ದೇವೇಗೌಡರ ಜೊತೆ ಅವರು ಯಾವ ರೀತಿ ಹೊಂದಿಕೊಂಡರೋ ಹಾಗೇ ನಮ್ಮ ತಂದೆಯವರ ಜೊತೆನೂ ಹೊಂದಿಕೊಂಡು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳಬೇಕಿತ್ತು.
36 ಸಾವಿರ ಮತಗಳಿಂದ ಸೋಲಿಸಿದ ಸಚಿವ ಜಿಟಿಡಿ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ತಾರೆ. ಆದ್ರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಕರೆದುಕೊಂಡು ಬಂದು ಸಿಎಂ ಮಾಡುವರೆಗೂ ಜೊತೆಗಿದ್ದ ನಮ್ಮ ತಂದೆಯನ್ನ ಕಡೆಗಣಿಸಿರೋದು ಎಷ್ಟು ಸರಿ? ಎಂದು ಸಿದ್ದುಗೆ ಪ್ರಶ್ನೆ ಹಾಕಿದ್ದಾರೆ ಅಮಿತ್.
ಹುಣಸೂರಿನ ಜನರು ಕೂಡ ಸಿದ್ದು - ವಿಶ್ವನಾಥ್ ವೇದಿಕೆ ಹಂಚಿಕೊಳ್ತಾರೇ ಅನ್ನೋದನ್ನ ನಿರೀಕ್ಷೆ ಮಾಡಿದ್ದರು.
ಆದ್ರೆ, ಸಿದ್ದರಾಮಯ್ಯ ನವರು ಏಕೆ ವೇದಿಕೆ ಹಂಚಿಕೊಳ್ಳಲಿಲ್ಲ ಎಂದು ಸಿದ್ದು ವಿರುದ್ಧ ಕಿಡಿಕಾರಿದ್ದಾರೆ ಅಮಿತ್.