ರಾಜ್ಯಕ್ಕೆ ನೀರು ಬಿಡುಗಡೆಗೆ ವಿರೋಧ; ಮಹಾ ಸಿಎಂಗೆ ಪತ್ರ ಬರೆದ ಶಾಸಕ
ಶುಕ್ರವಾರ, 10 ಮೇ 2019 (17:11 IST)
ಕರ್ನಾಟಕ ರಾಜ್ಯಕ್ಕೆ ನೀರು ಬಿಡುಗಡೆ ವಿರೋಧಿಸಿ ಮುಖ್ಯಮಂತ್ರಿಗೆ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಗೆ ಶಿವಸೇನೆ ಶಾಸಕನಿಂದ ಪತ್ರ ಬರೆಯಲಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ ಗೆ ಪತ್ರ ಬರೆದಿದ್ದಾರೆ ಶಾಸಕ ಶಂಭುರಾಜ ದೇಸಾಯಿ.
ಶಾಸಕ ದೇಸಾಯಿ, ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಪಾಟಣ್ ಕ್ಷೇತ್ರದ ಶಾಸಕರಾಗಿದ್ದಾರೆ.
ಕೃಷ್ಣಾ ನದಿಗೆ ಕೊಯ್ನಾ ಡ್ಯಾಂ ನಿಂದ ನೀರು ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದಾರೆ.
105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಕೊಯ್ನಾ ಡ್ಯಾಂನಲ್ಲಿ ಪ್ರಸ್ತುತ 36.89 ಟಿಎಂಸಿ ನೀರು ಸಂಗ್ರಹವಿದೆ. ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯಲ್ಲಿರುವ ಡ್ಯಾಂ ಇದಾಗಿದೆ.
ಕೃಷ್ಣಾ ನದಿಗೆ 4 ಟಿಎಂಸಿ ನೀರು ಕೇಳಿದೆ ಕರ್ನಾಟಕ ಸರ್ಕಾರ.
ಕರ್ನಾಟಕದಲ್ಲಿ ಬತ್ತಿ ಬರಿದಾಗಿರೋ ಕೃಷ್ಣಾ ನದಿಗೆ ನೀರು ಹರಿಸುವಂತೆ ಕೋರಲಾಗಿದೆ. ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ನದಿ ಹರಿಯುತ್ತದೆ.
ಮೇ 8 ರಂದು ಸಿಎಂ ಫಡ್ನವಿಸ್ ಗೆ ಪತ್ರ ಬರೆದಿರುವ ಶಾಸಕ ದೇಸಾಯಿ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.