ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ

ಬುಧವಾರ, 24 ಅಕ್ಟೋಬರ್ 2018 (17:31 IST)
ಮಂಡ್ಯ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ಖಾಸಗಿ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೈಲ, ಅನಿಲ ಬೆಲೆ ಹೆಚ್ಚಾಗಿದೆ. ತೈಲ ಬೆಲೆ ಏರಿಕೆಗೆ ಕೆಟ್ಟ ಆರ್ಥಿಕ ನೀತಿ ಕಾರಣ ಎಂದು ಟೀಕೆ ಮಾಡಿದ್ದಾರೆ.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ವಾಪಸ್ ಬರುತ್ತೆ ಅಂದಿದ್ದರು. ಆದರೆ  20 % ರಷ್ಟೂ ಕಪ್ಪು ಹಣ ವಾಪಸ್ ಬರ್ಲಿಲ್ಲ. ರಕ್ಷಣಾ ಇಲಾಖೆ ಇತಿಹಾಸದಲ್ಲಿ 40 ಸಾವಿರದಷ್ಟು ದೊಡ್ಡ ಹಗರಣ ಆಗಿರಲಿಲ್ಲ ಎಂದರು. ಆದ್ರೆ ರೆಫೆಲ್ ಹಗರಣ ನಡೆದಿದೆ. ದೇಶದ ಜನ ಕೆಲಸ ಕೇಳಿದ್ರೆ ಬಿಜೆಪಿ ಯವ್ರು ಪಕೋಡ ಮಾರಿ ಅಂತಾರೆ ಎಂದು ದೂರಿದರು. ಕಪ್ಪು ಹಣ ವಾಪಸ್ ತರಲು ಬಿಜೆಪಿ ವಿಫಲವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ದುಸ್ಥರವಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ