ಸಿದ್ದರಾಮಯ್ಯ, ಧಮ್, ತಾಕತ್ ಇಲ್ವಾ..? - ಸಚಿವ ಸುನೀಲ್ ಕುಮಾರ್ ಪ್ರಶ್ನೆ

ಶುಕ್ರವಾರ, 28 ಜುಲೈ 2023 (18:36 IST)
ಉಡುಪಿ ವಿದ್ಯಾರ್ಥಿನಿ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.ಉಡುಪಿಯ ಇಡೀ ಘಟನೆ ಯನ್ನು ಪೊಲೀಸರು ಹಾಗೂ ಸರ್ಕಾರ ಮುಚ್ಚಿ ಹಾಕುವ ಹುನ್ನಾರ ನಡೆಸ್ತಿದೆ.ಎಂಟು ದಿನಗಳ ಕಾಲ ಎಫ್ಐಆರ್ ದಾಖಲು ಮಾಡಿಲ್ಲ ಅಂದರೆ ಸಹಜವಾಗಿ ದೊಡ್ಡ ಅನುಮಾನ ಶುರುವಾಗಿದೆ.ಮುಸಲ್ಮಾನ ಹೆಣ್ಣು ಮಕ್ಕಳು ಅಂತಾ ಸರ್ಕಾರ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡ್ತಿದೆಯಾ..?ಈ ಬಗ್ಗೆ ಉಡುಪಿ ಭಾಗ ಹಾಗೂ ರಾಜ್ಯದ ಜನರಲ್ಲಿ ಪ್ರಶ್ನೆ ಮೂಡ್ತಿದೆ.ಹಿಜಾಬ್ ಘಟನೆ ಆದಾಗ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ ಅಂದರೆ ಇದರ ಹಿಂದೆ ಎಷ್ಟು ದೊಡ್ಡ ಶಕ್ತಿ ಗಳು ಕೆಲಸ ಮಾಡಿದ್ವು ಎಂದು ಎಲ್ಲರಿಗೂ ಗೊತ್ತಿದೆ.ಹಾಗೇಯೆ ಇದರ ಹಿಂದೆ ದೊಡ್ಡ ಶಕ್ತಿ ಗಳು ಕೆಲಸ ಮಾಡ್ತಿವೆ.ಅಲ್ಲಿನ ಕಾಲೇಜು ವಿದ್ಯಾರ್ಥಿಗಳೇ ಆರೋಪ ಮಾಡಿದ್ದಾರೆ.ಆ ಮುಸ್ಲಿಂನ ಮೂವರು ವಿದ್ಯಾರ್ಥಿ ನಿಯರ ಮೊಬೈಲ್ ಬದಲಾವಣೆ ಮಾಡ್ತಿದ್ರು ಅಂತಾ ಅದಕ್ಕಾಗಿ ಆ ಮೂವರು ವಿದ್ಯಾರ್ಥಿನಿಯರ ಪೋಷಕರ ವಿಚಾರಣೆ ಮಾಡಿ ಬಿಜೆಪಿ ಈ ಘಟನೆ ಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ.ಯಾವುದೇ ಒತ್ತಡಕ್ಕೆ ಮಣಿಯದೇ, ಹಿಂಜರಿಯದೇ ಎಲ್ಲ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.
 
ಬಹಳ ಆಶ್ಚರ್ಯ ಮತ್ತೆ ದುರ್ದೈವ ಅಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರನ್ನು ಅಮಾಯಕರು ಎಂದು ಕಾಣ್ತಾರೆ.ಭಜರಂಗ ದಳದ ಕಾರ್ಯಕರ್ತ ರನ್ನು ಗಡಿಪಾರು ಮಾಡುತ್ತದೆ.ಉಡುಪಿಯ ಪ್ರಕರಣ ತನಿಖೆ ಆಗಬೇಕು ಎಂಬ ರಶ್ಮಿ ಮನೆಗೆ ಪೊಲೀಸರು ರಾತ್ರೋ ರಾತ್ರಿ ಹೋಗ್ತಾರೆ.ಈ ಪ್ರಕರಣದಲ್ಲಿ ಸರ್ಕಾರದ ಮೌನ ನೋಡಿದ್ರೆ ವೀರವೇಷದ ಭಾಷಣ ಮಾಡುವ ಸಿದ್ದರಾಮಯ್ಯನ ತಾಕತ್ರು, ಆ ವಿದ್ಯಾರ್ಥಿ ಮನೆಗೆ ಹೋಗೋಕೆ ಆಗ್ತಿಲ್ವಾ..?ವಿಪಕ್ಷ ಇಲ್ಲದೇ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ, ಧಮ್, ತಾಕತ್ ಇಲ್ವಾ..? ಉಡುಪಿ ಗೆ ಹೋಗೋಕೆ.ತಕ್ಷಣ ಸರ್ಕಾರ ಇದರ ಬಗ್ಗೆ ಸಮಗ್ರವಾದ ತನಿಖೆಯನ್ನು ಮಾಡಬೇಕು.ತಮಾಷೆ ಎನ್ನದೇ, ಗಂಭೀರವಾಗಿ ತೆಗೆದು ಕೊಳ್ಳಬೇಕು.ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು, ಸುಮ್ಮನೆ ಆದರೆ, ಮುಂದಿನ ದಿನಗಳಲ್ಲಿ ನಮ್ಮ ಎರಡು ಜಿಲ್ಲೆಗಳು ಅಪಾಯಕ್ಕೆ ಸಿಲುಕಬಹುದು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ