ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ನಾಯಕರು

ಗುರುವಾರ, 5 ಜನವರಿ 2023 (18:40 IST)
ಸಿಎಂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರು ಬಂದಾಗ ಅವರ ಮುಂದೆ ನಿಲ್ಲುವಂತ ದೈರ್ಯ ಇಲ್ಲ ನಾಯಿ ಮರಿಯಂತೆ ಇರುತ್ತಾರೆ ಎಂಬ ಹೇಳಿಕೆ ಈಗಾ ಸಾಕಷ್ಟು ಚರ್ಚೆ ಗೆ ಗ್ರಾಸವಾಗಿದೆ. ಈ ವಿಚಾರಕ್ಕೆ ಸಂಭಂದಪಟ್ಟಂತೆ ಕೆಪಿಸಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ಸಿದ್ದರಾಮಯ್ಯ ಸಿಎಂರನ್ನ ನಾಯಿ ಮರಿಗೆ ಹೋಲಿಸಿ ಮಾತನಾಡಿದ್ದು ನನಗೆ ಗೊತ್ತಿಲ್ಲ. ನಮ್ಮ‌ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ  ಗೌರವ ಇದೆ.ಕಳ್ಳರನ್ನ ಹಿಡಿಯೋಕೆ ರಕ್ಷಣೆಗೆ ನಾಯಿ‌ಬೇಕು ಎಂದರು ಇನ್ನೂ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಅವರು ಹಾಗೇನೇ ಅಂತಾ ಸಿದ್ದರಾಮಯ್ಯಗೆ ಈಗ ಗೊತ್ತಾಗಿದೆ.ನಾನು ಯಾವತ್ತೋ ಈ ಮಾತನ್ನು ಹೇಳಿದ್ದೇನೆ. ಎಂದು ಸಿಎಂ ಬೊಮ್ಮಾಯಿ ಬಗ್ಗೆ ಲೇವಡಿ ಮಾಡಿದ್ರು. ಬಿ ಕೆ ಹರಿಪ್ರಸಾದ್ ಮಾತನಾಡಿ ಸಿದ್ದರಾಮಯ್ಯ, ಕುಮಾರಸ್ವಾಮಿ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಅವರು ಬಸವರಾಜ ಬೊಮ್ಮಾಯಿ ಬಗ್ಗೆ ಮಾತಾಡಿದ್ದಾರೆ. ಪ್ರಧಾನಿ ಮೋದಿ ಅವರು ಸೋನಿಯಾ ಗಾಂಧಿ, ಶಶಿತರೂರ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ ಏನೇನು  ಮಾತಾಡಿದ್ದಾರೆ ಜಗತ್ ಜಾಹಿರ ಆಗಿದೆ ಎಂದು ಹೇಳಿರು. ಇನ್ನೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಸಿಎಂ ಅವರನ್ನು ನಾಯಿ‌ ಮರಿಗೆ ಹೋಲಿಸಿದ್ರು ‌ಎಂದು ಹೇಳಲು ಆಗಲ್ಲ ಬಿಜೆಪಿಯವರ ಸಾಮರ್ಥ್ಯ ಶಕ್ತಿ ಪ್ರದರ್ಶನ ಮೋದಿ ಅವರ ಮುಂದೆ ಮಾಡಲ್ಲ. 25 ಸಂಸದರು ರಾಜ್ಯದಿಂದ ಹೋಗಿದ್ದಾರೆ. ಆದರೂ ರಾಜ್ಯ ಅನ್ಯಾಯ ಆಗುತ್ತಿದೆ ಎಂಬುದರ ಅರ್ಥದಲ್ಲಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡ್ರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ