`ಕಮಿಷನ್ ಹೊಡೆಯಲು ಮುಂದಾಗಿದ್ದಾರೆ- ಸಿದ್ದರಾಮಯ್ಯ
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸವನ್ನು ಯದ್ವಾತದ್ವಾ ಲೂಟಿ ಮಾಡುತ್ತಿದೆ, ಚುನಾವಣೆಗೆ ಹಣ ಮಾಡಿಕೊಳ್ಳಲು ಪ್ರಾಜೆಕ್ಟ್ಗಳನ್ನು ಅವರು ಮಾಡುತ್ತಿದ್ದಾರೆ. ಜೊತೆಗೆ ಕಮಿಷನ್ ಹೊಡೆಯಲು ಮುಂದಾಗುತ್ತಿದ್ದಾರೆ. ಅಂತಾ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು. ಈಗಾಗಲೇ ರಾಜ್ಯ ಸರ್ಕಾರದ ವಿರುದ್ದ 40 % ಕಮಿಷನ್ ಆರೋಪ ಕೇಳಿ ಬಂದಿದ್ದು, 40 % ಕಮಿಷನ್ ಮುಂದುವರೆದ ಭಾಗ ಇದು. ಜನರ ತೆರಿಗೆ ಹಣ ರಕ್ಷಣೆ ಮಾಡಬೇಕಿರೋದು ನಮ್ಮ ಜವಾಬ್ದಾರಿ. ಆದರೆ ಈ ಸರ್ಕಾರ ಯಾರು ಹೆಚ್ಚು ಕಮಿಷನ್ ಕೊಡುತ್ತಾರೆ ಅವ್ರಿಗೆ ಕಟ್ರಾಕ್ಟ್ ಕೊಡುತ್ತಾರೆ ಇಂತಹ ವರಸ್ಟ್ ಗೌರ್ನಮೆಂಟ್, ಕರಪ್ಟ್ ಗೌರ್ನಮೆಂಟ್ ಇನ್ನೊಂದಿಲ್ಲ ಎಂದು ಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.