ಉಪಚುನಾವಣೆಯ ನಂತರ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ- ಸಿದ್ದರಾಮಯ್ಯ
ಶನಿವಾರ, 16 ನವೆಂಬರ್ 2019 (10:07 IST)
ಮೈಸೂರು : ಡಿ.5 ರಂದು 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನಲೆ ಉಪಚುನಾವಣೆಯಲ್ಲಿ ಬಿಜೆಪಿಯವರು 8 ಸ್ಥಾನ ಗೆಲ್ಲುವುದಿಲ್ಲ. ಉಪಚುನಾವಣೆಯ ನಂತರ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯಾತ್ಯತೀತ ದಳಕ್ಕೆ ಯಾವುದೇ ನಿಲುವು ಇಲ್ಲ. ಯಾವುದೇ ಚುನಾವಣೆಯಲ್ಲಿ ಜೆಡಿಎಸ್ ಗೆ ನಿಲುವು ಇಲ್ಲ. ಜೆಡಿಎಸ್ ನಿಲುವಿನಿಂದ ಬಿಜೆಪಿಗೆ ಲಾಭವಾಗುತ್ತದೆ. ಉಪಚುನಾವಣೆಯಲ್ಲಿ ಬಿಜೆಪಿಯವರು ಅಕ್ರಮ ಮಾಡಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅಪರೇಷನ್ ಕಮಲದ ಬಗ್ಗೆ ಅನರ್ಹ ಶಾಸಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋರ್ಟ್ ತೀರ್ಪಿನ ನಂತರ ಒಬ್ಬೊಬ್ಬರೇ ಸತ್ಯ ಹೇಳುತ್ತಿದ್ದಾರೆ. ಇದೆಲ್ಲವೂ ರಾಜ್ಯದ ಜನರಿಗೆ ಈಗ ಅರ್ಥವಾಗುತ್ತಿದೆ. ಅವರು ಏನೇ ಕಥೆ ಹೇಳಿದರೂ ಅನರ್ಹ ಶಾಸಕರು ಅನರ್ಹರೆಂಬ ಪಟ್ಟಿಯಲ್ಲಿಯೇ ಜನರ ಮುಂದೆ ಹೋಗಬೇಕು. ಅವರಿಗೆ ಅಂಟಿರುವ ಅನರ್ಹರೆಂಬ ಪಟ್ಟ ಹೋಗಿಲ್ಲ ಎಂದು ಹೇಳಿದ್ದಾರೆ.