ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ನಾರಾಯಣಸ್ವಾಮಿ ಕಿಡಿ

Sampriya

ಬುಧವಾರ, 6 ನವೆಂಬರ್ 2024 (15:27 IST)
Photo Courtesy X
ಹಾವೇರಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು ಎಂದು ಶಿಗ್ಗಾಂವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಕಿಡಿಕಾರಿದ್ದಾರೆ.

ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಎಷ್ಟು ಧೈರ್ಯ ಮಾಡಬಹುದು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. 10 ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವನಿರ್ಧಾರಿತವಾಗಿದೆ ಎಂದು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ. ಅವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ. ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯಗೆ ಗೊತ್ತಾ? ಇದೆಲ್ಲ ಸ್ಟೆಜ್ ಮ್ಯಾನೇಜ್ಡ್ ವಿಚಾರಣೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನನ್ನು ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ದೀರಿ ಎಂದು ಗುಡುಗಿದರು.  

ಲೋಕಾ ಅಧಿಕಾರಿಗಳು ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯ ಇಲ್ಲ. ವಿಚಾರಣೆಗೆ ಬರಲಿಲ್ಲ ಅಂತ ಅನಿಸಿಕೊಳ್ಳಬಾರದು ಎಂದು ಹೋಗಿದ್ದಾರೆ. ಇದು ಪೂರ್ವನಿರ್ಧಾರಿತ ಎಂದು ನಿಮ್ಮ ಟಿಪಿ ನೋಡಿದರೆ ಗೊತ್ತಾಗುತ್ತದೆ. ಕೋರ್ಟ್‌ಗೂ ನಾವು ಹೋಗುತ್ತೇವೆ. ಸಿಎಂ ದೋಖಾ ಮಾಡುತ್ತಿದ್ದಾರೆ, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ