ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕೆಂದ ಸಿದ್ದರಾಮಯ್ಯ

ಶುಕ್ರವಾರ, 6 ಡಿಸೆಂಬರ್ 2019 (17:31 IST)

ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಕಾಮುಕ ಆರೋಪಿಗಳಿಗೆ ಉಗ್ರವಾದ ಶಿಕ್ಷೆಯಾಗಿರೋ ಮರಣ ದಂಡನೆಯನ್ನೇ ವಿಧಿಸಬೇಕು. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.
 

ದೇಶದಲ್ಲಿ ಕಾಮುಕರಿಗೆ, ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸೋ ಶಿಕ್ಷೆ ಇಲ್ಲ. ಅತ್ಯಾಚಾರ ಮಾಡಿದವರನ್ನು ಮರಣ ದಂಡನೆಗೆ ಗುರಿಪಡಿಸೋ ಕಾನೂನು ಜಾರಿಗೆ ತರಬೇಕೆಂದರು.

ಹೈದ್ರಾಬಾದ್ ಎನ್ಕೌಂಟರ್ ವಿಷಯಕ್ಕೆ ಪ್ರತಿಕ್ರಿಯಿಸಿರೋ ಸಿದ್ದರಾಮಯ್ಯ, ಆರೋಪಿಗಳು ಓಡಿ ಹೋಗುತ್ತಿದ್ದಾಗ, ತಪ್ಪಿಸಿಕೊಳ್ಳುತ್ತಿರೋವಾಗ ಎನ್ಕೌಂಟರ್ ಮಾಡಬಹುದು. ಪೊಲೀಸರಿಗೆ ರಕ್ಷಣೆ ಬೇಕೆ ಬೇಕು ಅಂತ ಅನಿಸಿದಾಗಲೂ ಫೈರಿಂಗ್ ಮಾಡಬಹುದು ಎಂದಿದ್ದಾರೆ.

ಆದರೆ ಡೆಲಿಬರೇಟ್ ಆಗಿ ಎನ್ಕೌಂಟರ್ ಮಾಡೋದಕ್ಕೆ ಹೋಗಬಾರದು. ಹೀಗಂತ ಸಿದ್ದರಾಮಯ್ಯ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ