ಶಾಸಕರನ್ನು ಬರ ನಿರ್ವಹಣೆ ಸಮೀಕ್ಷೆಗೆ ಕಳಿಸುವೆ ಎಂದ ಬಿಎಸ್ ವೈ ನಿರ್ಧಾರಕ್ಕೆ ಸ್ವಾಗತ ಎಂದ ಸಿದ್ದರಾಮಯ್ಯ
ಶನಿವಾರ, 19 ಜನವರಿ 2019 (11:52 IST)
ಬೆಂಗಳೂರು : ಶಾಸಕರನ್ನು ಕರೆಸಿಕೊಂಡು ಬರ ನಿರ್ವಹಣೆ ಸಮೀಕ್ಷೆಗೆ ಕಳಿಸುವ ಬಿಎಸ್ ವೈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.
‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲ್ಲ. ಪ್ರತಿಪಕ್ಷವಾಗಿ ಕೆಲಸ ನಿರ್ವಹಿಸುತ್ತೇವೆ. ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಭಯ ಬೇಡ. ಗುರುಗ್ರಾಮದಿಂದ ನಮ್ಮ ಶಾಸಕರಿಗೆ ಬರಲು ಹೇಳಿ ರಾಜ್ಯಾದ್ಯಂತ ಬರ ಅಧ್ಯಯನ ಮಾಡುತ್ತೇವೆ’ ಎಂದು ಬಿ.ಎಸ್.ಯಡಿಯೂರಪ್ಪ ಅವರು ಇಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿ ‘ಯಡಿಯೂರಪ್ಪ ಅವರು ನುಡಿದಂತೆ ನಡೆಯಲಿ. ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳಲಿ. ದೆಹಲಿಯಲ್ಲಿದ್ದ ಶಾಸಕರನ್ನು ಕರೆಸಿಕೊಂಡು ಬರ ನಿರ್ವಹಣೆ ಸಮೀಕ್ಷೆಗೆ ಕಳಿಸುವ ಬಿಎಸ್ ವೈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ