ಸಿದ್ದರಾಮಯ್ಯ ಹೆಣ ಬಂದರೂ ಬಿಜೆಪಿಗೆ ಸೇರಿಸಲ್ಲ

ಗುರುವಾರ, 14 ಸೆಪ್ಟಂಬರ್ 2023 (16:20 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಅವರ ಹೆಣ ಬಂದರೂ ಕೂಡ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನನ್ನ ಹೆಣ ಕೂಡ ಹೋಗಲ್ಲ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಬಿಜೆಪಿಗೆ ಜೀವಂತವಾಗಿ ಬಂದರೂ ಕರೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅಂಗಲಾಚಿ ಬೇಡಿಕೊಂಡರೂ ನಾವು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ನಮಗೆ ಸಿದ್ದರಾಮಯ್ಯನವರ ಅವಶ್ಯಕತೆ ಇಲ್ಲ. ಇನ್ನು ಅವರ ಹೆಣದ ಮಾತು ದೂರ ಉಳಿಯಿತು ಎಂದರು. ಬಿಜೆಪಿ ವಿಷದ ಹಾವು ಎಂದ ಉದಯ ನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆಯಿಲ್ಲ. ಧರ್ಮಕ್ಕೂ ನಿಷ್ಠೆಯಿಲ್ಲ. ಒಂದು ಕಾಲದಲ್ಲಿ ಎಲ್‌ಟಿಟಿಇಗೆ ಬೆಂಬಲ ನೀಡಿದವರು. ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಿದವರು. ಅವರಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ