‘ನಾನು ಅಸಮಾಧಾನಗೊಂಡಿದ್ದೇನೆ ಎಂದು ಯಾರು ಹೇಳಿದ್ದು ನಿಮಗೆ?’ ಸಿದ್ದರಾಮಯ್ಯ ಪ್ರಶ್ನೆ
ಬಜೆಟ್ ವಿಚಾರದ ಬಗ್ಗೆ ಜೆಡಿಎಸ್ ಜತೆಗೆ ತಮಗೆ ಅಸಮಾಧಾನವಿದೆ ಎಂಬ ವರದಿಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ‘ನಾನು ಅಸಮಾಧಾನಗೊಂಡಿದ್ದೇನೆ ನಿಮಗ್ಯಾರೀ ಹೇಳಿದ್ದು?’ ಎಂದು ಪ್ರಶ್ನಿಸಿದ್ದಾರೆ.
‘ನಾನು ಯಾವಾಗ, ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದೆ ಎಂಬುದು ನಿಮಗೆ ಗೊತ್ತಿಲ್ಲ. ನಾನು ಸಾಮಾನ್ಯವಾಗಿ ನನ್ನ ಆಪ್ತರೊಂದಿಗೆ ಮಾತನಾಡಿದ್ದನ್ನು ವಿಡಿಯೋ ಮಾಡಿ ಮಾಧ್ಯಮಗಳಿಗೆ ಹರಿಯಬಿಟ್ಟಿದ್ದು, ಅನೈತಿಕ’ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.