ಮತ್ತೆ ಸಿದ್ದರಾಮಯ್ಯ ಕಿಂಗ್ ಮೇಕರ್
ಕಾಂಗ್ರೆಸ್ ನಲ್ಲಿ ಈಗಾಗಲೇ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ ಸ್ಥಾನಗಳು ಬೆರಳಿಕೆಯಷ್ಟಿವೆ. ಹೀಗಾಗಿ ಅತೃಪ್ತರ ಸಂಖ್ಯೆ ಹುಟ್ಟಿಕೊಳ್ಳುವ ಸಾಧ್ಯತೆ ಖಂಡಿತಾ ಇದೆ.
ಇವರೆಲ್ಲರನ್ನೂ ಸಮಾಧಾನಿಸಿ, ಸರ್ಕಾರಕ್ಕೆ ಯಾವುದೇ ತೊಂದರೆಯಾಗದಂತೆ ಸಚಿವ ಸ್ಥಾನ ಹಂಚಿಕೆ ಮಾಡಲು ಸಿದ್ದರಾಮಯ್ಯಗೆ ಹೊಣೆಗಾರಿಕೆ ನೀಡಲಾಗಿದೆ. ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆಯಾದಾಗ ಸಿದ್ದರಾಮಯ್ಯ ಬಣದಲ್ಲಿ ಅಸಮಾಧಾನ ಹೆಚ್ಚಿತ್ತು. ಈ ಬಾರಿಯಾದರೂ ಆ ಅಸಮಾಧಾನದ ಪ್ರಮಾಣ ಕಡಿಮೆಯಾಗುವುದೋ ನೋಡಬೇಕು.