ಸರ್ಕಾರಿ ಮಾಹಿತಿಗಳನ್ನು ಕೊಡಬೇಡಿ ಎಂದರಾ ಸಿಎಂ ಎಚ್ ಡಿಕೆ? ಸಿಎಂ ನಡೆಗೆ ಬಿಎಸ್ ವೈ ಅನುಮಾನ
ಎಚ್ ಡಿಕೆ ಇಂತಹದ್ದೊಂದು ಆದೇಶ ನೀಡಿದ್ದಾರೆಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳ ನಡೆಯನ್ನೇ ಅನುಮಾನಿಸಿದ್ದಾರೆ.
‘ಸರ್ಕಾರ ಯಾಕೆ ತನ್ನ ಕಾರ್ಯಕ್ರಮಗಳ ಕುರಿತು ಜನರಿಂದ ಗೌಪ್ಯವಾಗಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ ಮಾತ್ರ ಈ ರೀತಿ ಒಳಗೊಳಗೇ ಕೆಲಸ ಮಾಡುತ್ತಾರೇನೋ. ಆದರೆ ಸಿಎಂ ಕುಮಾರಸ್ವಾಮಿಯವರ ಈ ನಡೆ ನೋಡಿದರೆ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದು ಖಚಿತ’ ಎಂದು ಬಿಎಸ್ ವೈ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.