ದನದ ಮಾಂಸವಾದರೂ ತಿನ್ತೇನೆ, ಕೇಳಕ್ಕೆ ಅವರ್ಯಾರು? ಮಾಜಿ ಸಿಎಂ ಸಿದ್ದು ಬಾಡೂಟ ವಿವಾದ
ಮಂಗಳವಾರ, 29 ಡಿಸೆಂಬರ್ 2020 (11:06 IST)
ಬೆಂಗಳೂರು: ಹನುಮ ಜಯಂತಿಯಂದು ಬಾಡೂಟ ಸೇವಿಸುವಾಗ ಹನುಮ ಯಾವಾಗ ಹುಟ್ಟಿದ್ದ ಅಂತ ಗೊತ್ತಾ? ಸುಮ್ನೇ ತಿನ್ಲಾ ಎಂದು ಪಕ್ಕದಲ್ಲಿದ್ದವರಿಗೆ ಹೇಳಿ ಸ್ವಗ್ರಾಮದಲ್ಲಿ ಗಡದ್ ಬಾಡೂಟ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಅದುವೇ ಮುಳುವಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಸಿದ್ದರಾಮಯ್ಯನವರ ಈ ಮಾತನ್ನು ಖಂಡಿಸಿದ್ದಾರೆ. ಈ ವಿವಾದ ಈಗ ಸಿದ್ದರಾಮಯ್ಯನವರನ್ನು ಮತ್ತಷ್ಟು ಕೆರಳಿಸಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಸಿದ್ದು ನಾನು ದನದ ಮಾಂಸವಾದರೂ ತಿನ್ತೇನೆ. ಕೇಳಕ್ಕೆ ಅವರ್ಯಾರು? ನಾನು ಈ ಮೊದಲು ಅಸೆಂಬ್ಲಿಯಲ್ಲೂ ಇದನ್ನೇ ಹೇಳಿದ್ದೆ. ನನ್ನ ಆಹಾರ, ನನ್ನ ಹಕ್ಕು ಎಂದು ತಿರುಗೇಟು ನೀಡಿದ್ದಾರೆ.