ಸ್ವಕ್ಷೇತ್ರದ ನೆರೆ ಸಂತ್ರಸ್ತರ ಭೇಟಿ ವೇಳೆ ಅಧಿಕಾರಿ ಮೇಲೆ ಫುಲ್ ಗರಂ ಆದ ಸಿದ್ದರಾಮಯ್ಯ
ಬುಧವಾರ, 23 ಅಕ್ಟೋಬರ್ 2019 (11:24 IST)
ಬಾದಾಮಿ : ತಮ್ಮ ಸ್ವಕ್ಷೇತ್ರದ ನೆರೆ ಸಂತ್ರಸ್ತರ ಭೇಟಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿನ ಅಧಿಕಾರಿ ಮೇಲೆ ಪುಲ್ ಗರಂ ಆಗಿದ್ದಾರೆ.
ಇಂದು ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ ಸ್ಥಳಕ್ಕೆ ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಪುಲ್ ಗರಂ ಆದ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರಿಗಳು ಕತ್ತೆ ಕಾಯ್ತಿದ್ದಾರಾ? ನನಗಿಂತ ಮುಂಚೆ ಬರೋಕೆ ಆಗಲ್ವಾ? ಏಯ್ ಎಲ್ಲಿದ್ದಾರಯ್ಯ ಅಧಿಕಾರಿಗಳು ಎಂದು ಪುಲ್ ಗರಂ ಆಗಿ ವಾಗ್ದಾಳಿ ನಡೆಸಿದ್ದಾರೆ.