ಭಾಗ್ಯಗಳನ್ನ ಕೊಟ್ಟ ಸಿದ್ದುಗೆ ಕ್ಷೇತ್ರ ಭಾಗ್ಯವಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಗುರುವಾರ, 23 ಮಾರ್ಚ್ 2023 (16:52 IST)
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ. ಆಡಳಿತ ಗದ್ದುಗೆ ಹಿಡಿಯಲು ಉಭಯ ಪಕ್ಷಗಳು ಹರಸಾಹಸ ನಡೆಸಿವೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದೆ. ಈ ಕುರಿತು BJP ಸಂಸದ ಪ್ರತಾಪ್ ಸಿಂಹ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಮಾತನಾಡಿದ್ದಾರೆ. ‘ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ. ಕ್ಷೇತ್ರ ಹುಡುಕಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಅಂದರೆ ಸಿದ್ದರಾಮಯ್ಯರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ ಎಂದಾಯಿತು. ಅವರ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಬರುತ್ತಾರೆ ಎಂದು ಪ್ರತಾಪ್​ ಸಿಂಹ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ