ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ!

ಬುಧವಾರ, 19 ಜುಲೈ 2023 (08:22 IST)
ಬೆಂಗಳೂರು : ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನೇ ಪಾಪಿ ಮಗ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ನಡೆದಲ್ಲಿ ನಡೆದಿದೆ.

ಶರತ್ ಎನ್ನುವಾತ ತನ್ನ ತಂದೆ ತಂದೆ ಭಾಸ್ಕರ್, ತಾಯಿ ಶಾಂತಾಳನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಶರತ್, ತನ್ನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದ ಎಂದು ತಿಳಿದುಬಂದಿದ್ದು, ಈ ಬಾರಿ ಅವರ ಪ್ರಾಣವನ್ನೇ ತೆಗೆದಿದ್ದಾನೆ.

ಶಾಂತಾ ಇತ್ತೀಚೆಗೆ ಕೇಂದ್ರದ ನೌಕರಿಯಿಂದ ನಿವೃತ್ತಿಯಾಗಿ ಮನೆಯಲ್ಲಿದ್ದರೆ, ಪತಿ ಭಾಸ್ಕರ್ ಖಾಸಗಿ ಕ್ಯಾಂಟೀನ್ವೊಂದರಲ್ಲಿ ಕ್ಯಾಶಿಯರ್ ಆಗಿದ್ದ. ಇನ್ನು ಈ ದಂಪತಿಗೆ ಇಬ್ಬರು ಮಕ್ಕಳಿದ್ದರು.

ಇನ್ನೊಬ್ಬ ಮಗ ಕೆಲಸಕ್ಕೆ ಹೋಗುತ್ತಿದ್ದರೆ ಮತ್ತೋರ್ವ ಮಗ ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದ.ಅಲ್ಲದೇ ಶರತ್ ಮನೆಯಲ್ಲಿ ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದ. ನಿನ್ನೆ(ಜುಲೈ 17) ಸಹ ಸಂಜೆ ಕುಡಿದು ಬಂದು ತಂದೆ-ತಾಯಿ ಜೊತೆ ಗಲಾಟೆ ಮಾಡಿಕೊಂಡಿದ್ದು, ಆ ವೇಳೆ ಶಾಂತಾ ಹಾಗೂ ಭಾಸ್ಕರ್ಗೆ ರಾಡ್ನಿಂದ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ