85 ನೇ ಸಾಹಿತ್ಯ ಸಮ್ಮೇಳನ - ಕನ್ನಡ ಪ್ರೇಮಿಗಳನ್ನು ಹಾಡಿ, ಕುಣಿಸಿದ ಗಾಯಕ ವಿಜಯ್ ಪ್ರಕಾಶ್
ಶನಿವಾರ, 8 ಫೆಬ್ರವರಿ 2020 (14:06 IST)
ಬೆಳೆಗೆದ್ದು ಯಾರ ಮುಖವಾ ನಾನು ನೋಡಿ ಅಂದಾನೋ ಅದೃಷ್ಟ ನೋ ಮುಂದೆ ಕುಂತಿದೆ..... ಕನಸಲ್ಲಿ ಅಲೆಲೇ ಬಳಿ ಬಂದು ಅಲೆಲೇ....
ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಅವರ ಹಾಡಿನ ಮೋಡಿಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆ ಸಭಾಗಂಣದಲ್ಲಿ ಕಿಕ್ಕಿರಿದ ಜನಸ್ತೋಮ, ಮೊಬೈಲ್ ದ್ವೀಪ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪೋತ್ಸವ ಮಾಡಿದಂತೆ ಕಾಣುತ್ತಿತ್ತು.
ತರವಲ್ಲ ತಗಿ ತಂಬೂರಿ ಸ್ವರ ಬರದೇ ಬಾರಿಸಿದಿರೆ ತಂಬೂರಿ... ನೆರಿದಿದ್ದ ಜನರನ್ನು ಶಿಶನಾಳದೀಶನ ತಂಬೂರಿ..ಸ್ವರಕ್ಕೆ ಕುಣಿವಂತೆ ಮಾಡಿತು. ಯುವ ಜನಾಂಗ ಅಂತು ಮನ ಬಿಚ್ಚಿ ಹುಚ್ಚೇದ್ದು ಸಿಳೆ, ಚಪ್ಪಾಳೆ, ಮುಗಿಲಿಗೆ ಮುಟ್ಟುವಂತೆ ಇತ್ತು.
ಎಚ್. ಎಸ್. ವೆಂಕಟೇಶಮೂರ್ತಿಯವರ ಧಾರವಾಹಿಯ ಶೀರ್ಷಿಕೆ ಗೀತೆ ಹಾಗೂ ಶಿ. ಅಶ್ವಥ್ ಅವರ ಕಾಣದಾ ಕಡಲಿಗೆ ಹಂಬಲಿಸಿದೆ ಮನಾ...., ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಂತೆ.....
ಸಭಾಗಂಣ ಜನರಿಗೆ ಸ್ವಲ್ಪ ಹೊತ್ತು ಶಾಂತ ಮಾಡಿತು.
ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರ ಸುಮಧುರ ಕಂಠ ತಲೆ ಆಡಿಸಿದರು, ಜೊತೆಯಲ್ಲಿ ಜೋತೆ ಜೋತೆಯಲ್ಲಿ ಇರುವೇನೂ ಹೀಗೆ ಎಂದು..... , ಪ್ರೀತಿ ಎಂದರೇನು ಎಂದು ನಾನು ಈಗ ಅರಿತೇನೂ.......ನೆರೆದಿದ್ದ ಜನ ತಮ್ಮ ಹಳೆಯ ಪ್ರೇಮಕತೆಗೆ ಜಾರಿದ ಹಾಗೆ ಮೆಲಕೂ ಹಾಕುತ್ತಿದ್ದರು.
ಅವರ ಮಿಜುಕ್ ಅಂತೂ ಅದ್ಭುತವಾಗಿ ವಾದ್ಯ ನುಡಿಸುವುದರ ಮೂಲಕ ಜನಸ್ತೋಮವನ್ನ ಕುಣಿವಂತೆ ಮಾಡಿತು.
ನೂರೊಂದು ನೆನಪು ಎದೆ ಆಳದಿಂದ ಹಾಡಾಗಿ ಬಂತು ಆನಂದದಿಂದ....... ಸಭಾಗಂಣ ಜನಕ್ಕೆ ಹಳೆ ಪ್ರೇಯಸಿಯನ್ನ ನೆನಪು ಮಾಡಿತು.
ತರ ತರ ಹಿಡಿಸಿದೆ.......
ಸೀರೆಯಲಿ ಹುಡುಗಿರನ್ನ ನೋಡಲೇಬಾರದು.......
ನಾವ್ ಮನೆಗೆ ಹೊಗೋದಿಲ್ಲ.....
ಯಾರೆ ಬಂದರೂ ಎದರು ಯಾರೇ ನಿಂತು ಮಾತು ತಪ್ಪದ ಯಜಮಾನ.....
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ....
ಕೇಳಿ ನೆರೆದುವುರ ಭಾಂದವರೆ.. ಗಾಳಿ ಮಾತಿನ ಬಜಾರು ಸುದ್ದಿ ಹೇಳಿದೆ ಸುಮಾರು.. ಹ್ಯಾಂಡ್ ಸಪ್ ಹ್ಯಾಂಡ್ ಸಪ್..... ಇದು ಚರಿತ್ರೆ ಸೃಷ್ಟಿಸುವ ಅವತಾರ......
ಜೀವನಾ ಟಾನಿಕ್ ಬಾಟಲೇ ಅಲ್ಲಾಡುಸು ಅಲಾಡುಸು.....
ಯಾರೇ ನೀನೂ ರೊಜಾ ಹೂವೆ.... ಯಾರೆ ನೀನು ಮಲ್ಲಿಗೆ ಹೂವೆ.....
ಹೇಳೆ ಓ ಚೆಲುವೆ...
ಅನುರಾಧಾ ಭಟ್ ಅವರ ಅಪ್ಪಾ ಐ ಲವ್ ಯು ಪಾ....... ಕಂಠದಿಂದ ಮೂಡಿ ಬಂತು.
ಈ ಎಲ್ಲ ಹಾಡುಗಳಿಂದ ಜನರಿಗೆ ಸಂಗೀತದ ರಸದೌತನ ಉಣ ಬಡಿಸಿದರು.