ರೇಖಾಚಿತ್ರ ಬಿಡುಗಡೆಯಾದ್ರೂ ಸಿಕ್ಕಿಲ್ಲ ಹಂತಕರ ಸುಳಿವು
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 40 ದಿನ ಕಳೆದಿದೆ. ಭಾನುವಾರ, ಸರ್ಕಾರಿ ರಜೆ, ದೀಪಾವಳಿ ರಜೆ ಸಂದರ್ಭದಲ್ಲಿಯೂ ನಿರಂತರವಾಗಿ ಹುಡುಕಾಟ ನಡೆಸಿದರೂ ಹಂತಕರ ಸುಳಿವು ಮಾತ್ರ ಪತ್ತೆಯಾಗಿಲ್ಲ. ಅಧಿಕಾರಿಗಳಿಗೆ ಕೇವಲ ಬಿಟ್ಟಿ ಸಲಹೆಗಳು ಬಿಟ್ಟರೆ ಹಂತಕರ ಪತ್ತೆಗೆ ನಿಖರ ಸುಳಿವು ಸಾರ್ವಜನಿಕರಿಂದ ಸಿಕ್ಕಿಲ್ಲ.
ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಯಾದ ಬಳಿಕ ಎಸ್‍ಐಟಿ ನೀಡಿದ್ದ ದೂರವಾಣಿ ಸಂಖ್ಯೆಗೆ ಇದುವರೆಗೆ 500 ಕರೆಗಳು ಬಂದಿವೆ ಎನ್ನಲಾಗಿದೆ. ಆದರೆ ಅದ್ಯಾವುದೂ ಹಂತಕರ ಪತ್ತೆಗೆ ಸಣ್ಣ ಸುಳಿವು ಕೂಡ ನೀಡಿಲ್ಲ. ಎಸ್‍ಐಟಿ ಅಧಿಕಾರಿಗಳಿಂದಲೇ ಕರೆ ಮಾಡಿದವರು ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.