ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ ಐಟಿ ಬಲೆ ಬೀಸಿದೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೇ ಪ್ರಜ್ವಲ್ ಜರ್ಮನಿಗೆ ತೆರಳಿದ್ದರು. ಇದಾದ ಬಳಿಕ ಅವರ ಮೇಲೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. ಎಸ್ ಐಟಿ ತನಿಖೆಗೆ ಹಾಜರಾಗುವಂತೆ ಪ್ರಜ್ವಲ್ ಗೆ ನೋಟಿಸ್ ನೀಡಲಾಗಿತ್ತು.
ಆದರೆ ಇದುವರೆಗೆ ಪ್ರಜ್ವಲ್ ವಿದೇಶದಿಂದ ಮರಳಿಲ್ಲ. ಮೇ 7 ರ ಬಳಿಕ ಕರ್ನಾಟಕಕ್ಕೆ ಮರಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೆ ಅವರು ಬರುವ ಬಗ್ಗೆ ಯಾವುದೇ ಸೂಚನೆ ಇಲ್ಲ. ಈಗಾಗಲೇ ಎಸ್ ಐಟಿ ಎಲ್ಲಾ ಏರ್ ಪೋರ್ಟ್ ಗಳಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಿದೆ.
ವಿಶೇಷವಾಗಿ 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ ನೀಡಲಾಗಿದೆ. ಈ ದೇಶದ ಯಾವುದೇ ಏರ್ ಪೋರ್ಟ್ ಗೆ ಪ್ರಜ್ವಲ್ ಬಂದರೆ ಅವರ ಬಂಧನವಾಗಲಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಎಲ್ಲಾ ಮೂಲಗಳಿಂದಲೂ ಬಲೆ ಬೀಸಿದೆ.