ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಚಿವ ಅನಂತ ಕುಮಾರ್ ಪತ್ನಿ ವಿಚಾರಣೆ

ಗುರುವಾರ, 21 ಸೆಪ್ಟಂಬರ್ 2017 (11:54 IST)
ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹಂತಕರಿಗಾಗಿ ತೀವ್ರ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕೇಂದ್ರ ಸಚಿವ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಸೇರಿದಂತೆ 50 ಮಂದಿಯನ್ನು ವಿಚಾರಣೆಗೊಳಪಡಿಸಲಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.


ಗೌರಿ ಲಂಕೇಶ್ ವಿರುದ್ಧ ಸುಮಾರು 160 ಕ್ಕೂ ಹೆಚ್ಚು ಮಂದಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇವರಲ್ಲಿ ಸುಮಾರು 50 ಮಂದಿಯನ್ನು ವಿಚಾರಣೆಗೊಳಪಡಿಸಲು ಎಸ್ ಐಟಿ ತೀರ್ಮಾನಿಸಿದೆ. ಇವರಲ್ಲಿ ಅನಂತಕುಮಾರ್ ಪತ್ನಿ ತೇಜಸ್ವಿನಿ, ಡಿಕೆ ಶಿವಕುಮಾರ್ ಧಾರ್ಮಿಕ ಗುರು ದ್ವಾರಕನಾಥ್ ಗುರೂಜಿ, ಅಗ್ನಿ ಶ್ರೀಧರ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳಿವೆ ಎಂದು ವಾಹಿನಿ ವರದಿಯಲ್ಲಿ ಹೇಳಲಾಗಿದೆ.

ಗೌರಿ ಲಂಕೇಶ್ ಹಂತಕರ ಬಗ್ಗೆ ಎಲ್ಲಾ ಆಯಾಮಗಳಿಂದಲೂ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ಹೀಗಾಗಿ ಕೇಂದ್ರ ಸಚಿವರ ಗಣ್ಯರೂ ವಿಚಾರಣೆಗೊಳಪಡಬೇಕಿದೆ.

ಇದನ್ನೂ ಓದಿ…  ಸುಳ್ಳು ಗಿಳ್ಳು ಬೇಡ ಎಂದ ನಟಿ ರಮ್ಯಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ