ವಿದ್ಯಾರ್ಥಿಗಳಿದ್ದಾರೆ ಆದರೆ ಶಿಕ್ಷಕರೇ ಇಲ್ಲದ ಇಂಜಿನಿಯರಿಂಗ್ ಕಾಲೇಜ್ ನ್ನ ಪರಿಸ್ಥಿತಿ

ಸೋಮವಾರ, 15 ಆಗಸ್ಟ್ 2022 (20:35 IST)
ಸರ್ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದ, ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸುಮಾರು 105 ವರ್ಷಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿ) -ಖಾಯಂ ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿದೆ
ಪ್ರಾಂಶುಪಾಲ ಎಚ್.ಎನ್.ರಮೇಶ್ ಅವರು ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸಿಬ್ಬಂದಿ ಕೊರತೆ ಕುರಿತು ಪತ್ರ ಬರೆದಿದ್ದಾರೆ. 2007 ರಿಂದ ಖಾಯಂ ಬೋಧಕ ಸಿಬ್ಬಂದಿ ಮತ್ತು 1995 ರಿಂದ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ ಎಂದು ದಿ ನ್ಯೂ ಸ್ಯಾಂಡೆ ಎಕ್ಸ್‌ಪ್ರೆಸ್‌ನಲ್ಲಿ ಪತ್ರವು ತಿಳಿಸುತ್ತದೆ. "ಪ್ರಯೋಗಾಲಯಗಳಲ್ಲಿ ಯಾವುದೇ ಅರ್ಹ ಬೋಧಕೇತರ ಸಿಬ್ಬಂದಿ ಇಲ್ಲ ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.
 
ಡಿಸೆಂಬರ್ 2021 ರಲ್ಲಿ, ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬಿಲ್ 2021 ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಸಮಾನವಾಗಿ ಸ್ವಾಯತ್ತ ಸಂಸ್ಥೆಯಾಗಿ ಅಪ್‌ಗ್ರೇಡ್ ಮಾಡಲು ಅಂಗೀಕರಿಸಲಾಯಿತು. ಆದರೆ ರಾಜ್ಯ ಸರ್ಕಾರ ಇನ್ನೂ ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸದಸ್ಯರನ್ನು ನೇಮಕ ಮಾಡಿಲ್ಲ. ಇದು ಸೆನೆಟ್ ಮತ್ತು ಕಾರ್ಯಕಾರಿ ಮಂಡಳಿಯನ್ನು ರಚಿಸುವಲ್ಲಿ ಮತ್ತು ಇತರ ಅಧಿಕಾರಿಗಳ ನೇಮಕಾತಿಯಲ್ಲಿ ಸಹಾಯ ಮಾಡುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ