ಉಪಸಭಾಪತಿ ಧರ್ಮೇಗೌಡರ ಅಂತಿಮ ಕ್ಷಣದ ಬಗ್ಗೆ ಮಾಹಿತಿ ಕೊಟ್ಟ ರೈಲು ಚಾಲಕ

ಗುರುವಾರ, 31 ಡಿಸೆಂಬರ್ 2020 (10:12 IST)
ಚಿಕ್ಕಮಗಳೂರು: ಉಪಸಭಾಪತಿ ಎಸ್ ಎಲ್ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದು ಜನಶತಾಬ್ಧಿ ರೈಲಿಗೆ ನೇರ ನಿಂತು ಎಂದು ಸ್ವತಃ ರೈಲಿನ ಚಾಲಕರು ಸಾಕ್ಷ್ಯ ನುಡಿದಿದ್ದಾರೆ.


ಸೋಮವಾರ ರಾತ್ರಿ ಜನಶತಾಬ್ಧಿ ರೈಲಿಗೆ ತಲೆ ಕೊಟ್ಟು ಅವರು ಆತ್ಮಹತ್ಯೆ ಮಾಡಿರುವುದು ರೈಲ್ವೇ ಚಾಲಕನ ಮಾಹಿತಿಯಿಂದ ಖಚಿತವಾಗಿದೆ. ಸೋಮವಾರ ರಾತ್ರಿ ಕಡೂರು ಸಮೀಪ ಗುಣಸಾಗರ ಗ್ರಾಮದ ಬಳಿ ಹೋಗುತ್ತಿದ್ದ ವೇಳೆ ಸುಮಾರು 7 ಗಂಟೆ ಹೊತ್ತಿಗೆ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ರೈಲ್ವೆ ಹಳಿ ಮೇಲೆ ನಿಂತಿದ್ದರು. ವ್ಯಕ್ತಿ ನೇರಾ ನೇರವಾಗಿ ನಿಂತುಕೊಂಡಿದ್ದು ಕಂಡಿದೆ. ಆದರೆ ವೇಗವಾಗಿ ರೈಲು ಸಾಗುತ್ತಿದ್ದರಿಂದ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ರೈಲ್ವೇ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಧರ್ಮೇಗೌಡರು ಜನಶತಾಬ್ಧಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ