ಕೊರೊನಾದಿಂದ ಗುಣಮುಖರಾದವರಿಗೆ ಬರುತ್ತಿಲ್ಲ ನಿದ್ದೆ

ಭಾನುವಾರ, 24 ಏಪ್ರಿಲ್ 2022 (19:42 IST)
ಅಬ್ಬಾ ಇನ್ನೇನೂ ಕೊರೊನಾ ಕೂಡ ಇಲ್ಲಾ. ಎಲ್ಲವೂ ಮೊದಲಿನಂತೆ ಮರಳುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗ ಜನರಿಗೆ
ಅದ್ಯಾಕೋ ನಿದ್ದೆನೇ ಬರುತಿಲವಂತೆ,  ಕೊರೊನಾ ಆಫ್ಟರ್ ಎಫ್ಫೆಕ್ಟ್ಸ್ ನಿಂದ ನಿದ್ದೆ ಬೆನ್ನೆ ಶುರುವಾಗಿದೆ.ಇಡೀ ವಿಶ್ವವನ್ನೇ ನಡುಗಿಸಿದ ಹೆಮ್ಮಾರಿ ಕೊರೊನಾ ಇನ್ನೇನು ಮುಗಿಯಿತು . ಮತ್ತೆ ಎಲ್ಲಾ ಸಹಜಸ್ಥಿತಿಗೆ ಮರಳಿ ಬರುತ್ತಿದ್ರೆ ಒಂದಕ್ಕೆ  ಎರಡೆರಡು ಡೋಸ್ ಗಳನ್ನು ತೆಗೆದುಕೊಂಡು ನಮಗೆ ಇನ್ಮುಂದೆ ಕರೋನಾ ಬರಲ್ಲ ಅಂತ ನಿಟ್ಟುಸಿರು ಬಿಡುತ್ತಿದ್ದ ಜನರಿಗೆ ಇದೀಗ ಕೊರೊನಾ ಆಫ್ಟರ್ ಎಫೆಕ್ಟ್ ಶಾಕ್ ಕಾದಿದೆ.. ಕೊರೊನಾದಿಂದ ಗುಣಮುಖರದ ಬಹುತೇಕ ಜನರಿಗೆ ಕೊರೊನಾ ಆಫ್ಟರ್ ಎಫ್ಫೆಕ್ಟ್ಸ್ ಕಾಣಿಸಿಕೊಳ್ಳುತಿದ್ದು ದಿನವಿಡಿ ಸುಸ್ತು, ಸರಿಯಾಗಿ ನಿದ್ದೆಯಿಲ್ಲ,ಎಂದು ಕೊರೊನಾದಿಂದ ಗುಣಮುಖರದ  ಬಹುತೇಕ ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ನಿತ್ಯವೂ ನಮಗೆ 10-15 ಕರೆ ಬರುತ್ತಿದು, ಜನರು ಆತಂಕ ಪಡುವ ಅಗತ್ಯವಿಲ್ಲ, ಇವೆಲ್ಲವೂ ಸಹಜವಾಗಿ ಸರಿಹೋಗುವುದು, ಇವೆಲ್ಲವೂ ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತಿದು , ಹೆಚ್ಚಾಗಿ ಪ್ರೊಟೀನ್ ಅಂಶಗಳನ್ನು ಸೇವಿಸುವುದರಿಂದ ಶೀಘ್ರವಾಗಿ ಪರಿಹಾರ ಪಡೆಯಬಹುದು ಅಂತಾ  ವೈದ್ಯರು ಸಲಹೆ ನೀಡಿದ್ದಾರೆ‌‌‌‌‌.ಕೋವಿಡ್ ಎಂಬ ಹೆಮ್ಮಾರಿಯಿಂದ ಜನರು ಬೆಚ್ಚಿಬಿದ್ದಿದ್ರು. ಆದ್ರೆ ಈಗ ನಿದ್ದೆ ಸಮಸ್ಯೆಯಿಂದ ಬಾಳಲುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ