ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ; 1 ಕೆಜಿಗೆ 800 ರೂ. ಕುಸಿತ ಕಂಡ ಬೆಳ್ಳಿ ದರ

ಭಾನುವಾರ, 3 ಏಪ್ರಿಲ್ 2022 (18:44 IST)
ಬೆಂಗಳೂರು: ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Prices) ಇಂದು ಮತ್ತೆ ಕುಸಿತ ಕಂಡಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು 10 ಗ್ರಾಂಗೆ 150 ರೂ. ಇಳಿಕೆಯಾಗಿದೆ. ನಿನ್ನೆ ಭಾರೀ ಹೆಚ್ಚಳವಾಗಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 800 ರೂ. ಇಳಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
 
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,100 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,470 ರೂ. ಇದ್ದುದು 52,480 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,200 ರೂ. ಮುಂಬೈ- 47,950 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,950 ರೂ, ಬೆಂಗಳೂರು- 47,950 ರೂ, ಹೈದರಾಬಾದ್- 47,950 ರೂ, ಕೇರಳ- 47,950 ರೂ, ಪುಣೆ- 48,000 ರೂ, ಮಂಗಳೂರು- 47,950 ರೂ, ಮೈಸೂರು- 47,950 ರೂ. ಇದೆ.
 
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,580 ರೂ, ಮುಂಬೈ- 52,480 ರೂ, ದೆಹಲಿ- 52,480 ರೂ, ಕೊಲ್ಕತ್ತಾ- 52,480 ರೂ, ಬೆಂಗಳೂರು- 52,480 ರೂ, ಹೈದರಾಬಾದ್- 52,480 ರೂ, ಕೇರಳ- 52,480 ರೂ, ಪುಣೆ- 52,400 ರೂ, ಮಂಗಳೂರು- 52,480 ರೂ, ಮೈಸೂರು- 52,480 ರೂ. ಇದೆ.
 
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ (Silver Price) ಕೂಡ ಇಳಿಕೆಯಾಗುತ್ತಿದೆ.
 
ಇಂದಿನ ಬೆಳ್ಳಿಯ ದರ:
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 800 ರೂ. ಇಳಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,600 ರೂ. ಇದ್ದುದು ಇಂದು 66,800 ರೂ.ಗೆ ಕುಸಿತವಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,300 ರೂ, ಮೈಸೂರು- 71,300 ರೂ., ಮಂಗಳೂರು- 71,300 ರೂ., ಮುಂಬೈ- 66,800 ರೂ, ಚೆನ್ನೈ- 71,300 ರೂ, ದೆಹಲಿ- 66,800 ರೂ, ಹೈದರಾಬಾದ್- 71,300 ರೂ, ಕೊಲ್ಕತ್ತಾ- 66,800 ರೂ. ಆಗಿದೆ.
 ನಗರದ ಎಷ್ಟೋ ಜನಕ್ಕೆ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಅಂದ್ರೆ ಏನು ಅನ್ನುವುದೇ ಗೊತ್ತಿಲ್ಲ. ಯಾವುದೋ ತಿನ್ನಲು ಯೋಗ್ಯವಾದ ಮಾಂಸ ಕೊಟ್ರೆ ಸಾಕು ಅಂತಾ ಕೊಂಡುಕೊಳ್ತಿದ್ರು. ಇನ್ನು ನಗರದ ಮಾಂಸದ ಅಂಗಡಿಗಳಲ್ಲಿ ಯಾರನ್ನ ಕೇಳಿದ್ರು ನಾವು ಹಲಾಲ್ ಕಟ್ ತೆಗೆದುಕೊಳ್ತೇವೆ ಅಂತಾಲೆ ಹೇಳ್ತಿದ್ರು. ಮೊದಲಿನಂತೆ ಹಲಾಲ್ ತೆಗೆದುಕೊಳ್ತಿದ್ದೇವೆ ಅದರಲ್ಲಿ ಏನು ವ್ಯತ್ಯಾಸ ಇಲ್ಲ ಅಂತಾರೆ. ಆದ್ರೆ ಎದ್ದಿರುವ ವಿವಾದದಿಂದ ಮಾಂಸದ ಅಂಗಡಿಗಳ ಮೇಲೆ ಯಾವುದೇ ಪರಿಣಾಮ  ಆಗಿದಿಲ್ಲ. ಮಾಂಸದ ಅಂಗಡಿಗಳಲ್ಲಿ ಹಲಾಲ್ ಹೆಚ್ಚಿಗೆ ಸೇಲ್ ಆಗ್ತಿತ್ತು.  
ಇನ್ನು ಈ ಬಾರಿ ಪಾಪಣ್ಣ ಮಟನ್ ಸ್ಟಾಲ್ ನಲ್ಲಿ 180 ಕುರಿಗಳನ್ನ ಹೊಸತಡಿಕಿಗೆ ಕಡೆದಿದ್ರು. ಜೊತೆಗೆ ನಗರದ ಮಟನ್ ಅಂಗಡಿಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕುರಿಗಳನ್ನ ಕಡೆದಿದ್ರು . ಈ ಬಾರಿ ಮಟನ್ ಅಂಗಡಿಗಳಲಂತೂ ಬ್ಯುಸಿನೆಸ್ ಶೇ 25 ರಷ್ಟು ಹೆಚ್ಚಿತ್ತು. ಮಾಂಸದ ಖರೀದಿ ಯಾವುದೇ ತೊಂದರೆ ಇಲ್ಲದೇ ಸುಸೂತ್ರವಾಗಿ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ