ಬೆಳ್ಳಂ ಬೆಳಗ್ಗೆ ಎಸ್.ಎಂ. ಕೃಷ್ಣ ಅಳಿಯನಿಗೆ ಐಟಿ ಶಾಕ್

ಗುರುವಾರ, 21 ಸೆಪ್ಟಂಬರ್ 2017 (10:41 IST)
ಮಾಜಿ ಮುಖ್ಯಮಂತ್ರಿ ಎಸ್`.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಒಡೆತನದ ಎಬಿಸಿ ಕಂಪನಿಗೆ ಸೇರಿದ ಕಾಫಿ ಡೇಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬೆಂಗಳೂರಿನ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಮುಖ್ಯ ಕಚೇರಿಗೆ ಬೆಳ್ಳಂಬೆಳಗ್ಗೆ 8 ಕಾರುಗಳಲ್ಲಿ ಆಗಮಿಸಿರುವ ಐಟಿ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಇತ್ತ, ಸದಾಶಿವನಗರದ ಬಳಿ ಇರುವ ಆರ್`ಎಂವಿ ಬಡಾವಣೆಯಲ್ಲಿರುವ ಸಿದ್ಧಾರ್ಥ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಕಾಫಿ ಮೇಲೂ ದಾಳಿ ನಡೆದಿಎ. ಮೂಡಿಗೆರೆಯಲ್ಲಿರುವ ಕಾಫಿ ಎಸ್ಟೇಟ್ ಮೇಲೂ ಐಟಿ ಕಣ್ಣು ಬಿದ್ದಿದೆ ಎನ್ನಲಾಗಿದೆ.

ಇತ್ತ, ಕಾಫಿ ಡೇಯಲ್ಲಿ 20 ವರ್ಷ ಉದ್ಯೋಗಿಯಾಗಿದ್ದ ಡಿ.ಕೆ. ಶಿವಕುಮಾರ್ ಆಪ್ತ ಎನ್ನಲಾದ ರಜನೀಶ್ ಮನೆ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ಸಂದರ್ಭವೂ ರಜನೀಶ್ ಮನೆ ಮೇಲೆ ದಾಳಿ ನಡೆದಿತ್ತು. ಇದೀಗ, ಮುಂದುವರೆದ ಭಾಗವಾಗಿ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ