ಹಾಗಾಗೀ ಪ್ಲಾನ್ ಮಾಡಿ ಇಂದು ಬೆಳ್ಳಂಬೆಳಿಗೆ ಬೆಗ್ಗರ್ಸ್ ಕಾಲೋನಿಗೆ ಭೇಟಿ ನೀಡಿರುವ ಎಚ್.ಆಂಜನೇಯ, ಬೆಗ್ಗರ್ಸ್ ಕಾಲೋನಿಯಲ್ಲಿ ವಿವಿಧ ಪ್ರದೇಶದ ಜನರಿದ್ದಾರೆ. ಅವರಲ್ಲಿ ಕೆಲವರನ್ನು ಮಾತನಾಡಿಸಿ ಇಲಾಖೆಯ ಕಾರ್ಯವೈಖರಿಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಇದೇ ವೇಳೆ ದಲಿತ ಸಿಎಂ ವಿಚಾರ ಪ್ರಸ್ತಾಪ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ನಾನು ಮಾತನಾಡದಿರುವುದೇ ಒಳ್ಳೆಯದು. 2018 ರವರೆಗೂ ಈ ಪ್ರಶ್ನೆಯೇ ಬರುವುದಿಲ್ಲ. ಕೆಲವರು ಅನಾವಶ್ಯಕವಾಗಿ ಇಂತಹ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.