ಅಕ್ಕನ ಮಗಳ ಮದುವೆಗೆ ಬಂದವನು ಹೆಣವಾದ

ಮಂಗಳವಾರ, 28 ಡಿಸೆಂಬರ್ 2021 (11:28 IST)
ಬೆಳಗಾವಿ: ಅಕ್ಕನ ಮಗಳ ಮದುವೆಗೆಂದು ಬಂದ ಯೋಧ ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಅಕ್ಕನ ಮಗಳ ಮದುವೆಗೆಂದು ರಜೆ ಹಾಕಿ ಊರಿಗೆ ಬಂದಿದ್ದ ಯೋಧ ಈರಪ್ಪ ಮದುವೆಗೆ ವೆಡ್ಡಿಂಗ್ ಕಾರ್ಡ್ ಹಂಚಲು ಹೊರಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಮನೆಗೆ ಬಾರದೇ ಹೋದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಸಮೀಪದ ಪಾಳು ಬಾವಿಯಲ್ಲಿ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಮೃತದೇಹ ಹಾಕಿರುವುದು ಪತ್ತೆಯಾಗಿದೆ. ಕುಟುಂಬಸ್ಥರೇ ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ