ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಲಗ್ನ ಪತ್ರಿಕೆ ಡಿಸೈನರ್ ಬಂಧನ: 2.6 ಕೆ.ಜಿ ಅಫೀಮ್ ವಶ

ಶನಿವಾರ, 25 ಸೆಪ್ಟಂಬರ್ 2021 (22:23 IST)
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ  ಮಾದಕ ವಸ್ತು ಅಫೀಮನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್‌ ಒಬ್ಬನನ್ನು ಬಂಧಿಸಿರುವ ಹಲಸೂರು ಪೊಲೀಸರು 2.6 ಕೆಜಿ ಮಾದಕ ವಸ್ತು ಅಫೀಮ್ ಅನ್ನು  ವಶಪಡಿಸಿಕೊಂಡಿದ್ದಾರೆ.
 
ಸೆಪ್ಟೆಂಬರ್ 20  ರಂದು ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯ ಆಟದ ಮೈದಾನದ ಸಮೀಪ ರಾಜಸ್ತಾನ ಮೂಲದ ವ್ಯಕ್ತಿಯು ಮಾದ ಕವಸ್ತು ಅಫೀಮು ಮಾರಾಟದಲ್ಲಿ ತೊಡಗಿದ್ದಾನೆ ಎಂಬ ಬಗ್ಗೆ ಬಂದ ಖಚಿತ  ಮಾಹಿತಿ ಮೇರೆಗೆ ಇನ್ಸ್ ಕ್ಲರ್ ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
 
ಬಂಧಿತ ಆರೋಪಿ ಲಗ್ನ ಪತ್ರಿಕೆಗಳ ಡಿಸೈನರ್:
 
ಈ ಹಿಂದೆ ನಗರದ ನಾಗರತ್ನ ಪೇಟೆಯಲ್ಲಿ ಲಗ್ನ ಪತ್ರಿಕೆಗಳ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಕರೋನ  ಲಾಕ್‌ಡೇನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ರಾಜಸ್ತಾನದಿಂದ ಅಫೀಮನ್ನು ತಂದು  ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಐಷಾರಾಮಿ ಜೀವನ ನಡೆಸಲು ಗಿರಾಕಿಗಳು ಮತ್ತು ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಹಾಗೂ ಯುವ ಜನಾಂಗದ ಆರೋಗ್ಯವನ್ನು ಹಾಳು ಮಾಡುತ್ತಿದ್ದ ಎಂಬುದು ಪೊಲೀಸರು ತಿಳಿಸಿದ್ದಾರೆ. 
 
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ ಶರಣಪ್ಪ ನಿರ್ದೇಶನದಲ್ಲಿ ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕುಮಾರ್‌ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಮಂಜುನಾಥ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
drgs

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ