ರಾಯಚೂರು: ಮದುವೆ ಮಾಡಿಸಲಿಲ್ಲವೆಂಬ ಸಿಟ್ಟಿಗೆ ಮಗ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
75 ವರ್ಷದ ತಂದೆ ಕೊಲೆಗೀಡಾಗಿದ್ದಾರೆ. ತಂದೆ-ಮಗನ ನಡುವೆ ಹಣಕಾಸು ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಇದರಿಂದಾಗಿ ತಂದೆ-ತಾಯಿ ಇಬ್ಬರೂ ಮಗನಿಂದ ಪ್ರತ್ಯೇಕವಾಗಿ ವಾಸವಿದ್ದರು.
ಆದರೆ ಮಗನನ್ನು ಮಾತನಾಡಿಸಿಕೊಂಡು ಬರಲೆಂದು ಹೋಗಿದ್ದ ವೇಳೆ 35 ವರ್ಷವಾದರೂ ನನಗೆ ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೇ ಕೊಲೆ ಮಾಡಿದ್ದಾನೆ. ಇದೀಗ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.