ಹೈಕಮಾಂಡ್ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ ಎಂದಿರುವ ಅವರು, ಚುನಾವಣೆಗೆ ಸ್ಪರ್ಧಿಸದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದು ಕೂಡ ಒಳ್ಳೆಯ ವಿಚಾರವೇ ಎಂದು ಹೇಳುವ ಮೂಲಕ ಅವರ ವಿರುದ್ಧ ಕೇಳಿಬರುತ್ತಿರುವ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾತನಾಡಿದರು.
ಈ ಮೂಲಕ ತಮ್ಮ ಪುತ್ರ ಸುನೀಲ್ ಬೋಸ್ ಗೆ ಅವಕಾಶ ನೀಡುವ ಸಲುವಾಗಿ ಚುನಾವಣಾ ರಾಜಕಾರಣದಿಂದ ಹೊರಗುಳಿಯಲು ನಿರ್ಧರಿಸಿದ್ದಾರಾ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ನೀಡದೇ ವದಂತಿಗಳಿಗೆ ಪುಷ್ಠಿ ನೀಡುವಂತೆ ಹೇಳಿಕೆ ನೀಡಿದರು. ನಾನು ಸಿ.ವಿ.ರಾಮನ್ ನಗರದಿಂದ ಸ್ಪರ್ಧಿಸಲು ಬಯಸಿ ಅರ್ಜಿ ಹಾಕಿಲ್ಲ. ಅಲ್ಲದೇ ಟಿ.ನರಸೀಪುರದಲ್ಲಿ ಅಪ್ಪ -ಮಕ್ಕಳ ಪೈಪೋಟಿ ಇದೆ ಎನ್ನುವ ಪ್ರಶ್ನೆ ಉದ್ಭವಿಸಲ್ಲ ಎಂದೂ ಹೇಳಿದರು. ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ನಮ್ಮ ಗುರಿ. ಸಕಲೇಶಪುರಕ್ಕೂ ನನ್ನ ಕರೆಯುತ್ತಿದ್ದಾರೆ. ಅವರು ಪ್ರೀತಿಯಿಂದ ಕರೆಯುತ್ತಾರೆ ಅಷ್ಟೇ ಎಂದು ಸಚಿವ ಮಹಾದೇವಪ್ಪ ತಿಳಿಸಿದ್ದಾರೆ.