ಕೊಪ್ಪಳ : ಕಳೆದ ನಾಲ್ಕು ವರ್ಷಗಳಿಂದಲೂ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಲಿವೆಯೇ ಎನ್ನುವ ಆತಂಕ ಶುರುವಾಗಿದೆ.
ಈ ವೇಳೆ ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದಿರೋ ಸೆಫ್ಟಾನ್ ಫುಡ್ ಅಂಡ್ ಹಾಸ್ಪಿಟಾಲಿಟಿ ಕಂಪೆನಿಗೆ ಕಳೆದ ೪ ವರ್ಷಗಳಿಂದ ಸರ್ಕಾರದಿಂದ ಬರಬೇಕಿದ್ದ ಸುಮಾರು 25 ಕೋಟಿ ಹಣ ಬಾಕಿ ಉಳಿದಿರುವ ವಿಚಾರ ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಕೋಟಿ ಹಾಗೂ ಬಳ್ಳಾರಿ ಮಾಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 ಕೋಟಿ ಹಣ ಬಾಕಿಯಿದೆ. ಕಾರ್ಮಿಕ ಇಲಾಖೆಯ ಸಹಾಯಧನಕ್ಕೂ ಕೊಕ್ಕೆ ಬಿದ್ದಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಯಾಂಟೀನ್ ನಡೆಸುವುದೇ ಕಷ್ಟವಾಗುತ್ತಿದೆ. ಮಾಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ.
ಹಾಗಾಗಿ ನಾವು ಶೀಘ್ರದಲ್ಲೇ ಕಲಬುರಗಿ, ಬಳ್ಳಾರಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ಗಳನ್ನು ಬಂದ್ ಮಾಡುತ್ತೇವೆ ಎಂದು ಬಸಲಿಂಗಪ್ಪ ತಿಳಿಸಿದ್ದಾರೆ.