ರಾಜ್ಯದ ಕಾಂಗ್ರೆಸ್ ಶಾಸಕನ ವಿರುದ್ಧ ಬಿತ್ತು ಕೇಸ್

ಮಂಗಳವಾರ, 16 ಜೂನ್ 2020 (15:42 IST)
ರಾಜ್ಯದ ಕಾಂಗ್ರೆಸ್ ಶಾಸಕನ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಬಳ್ಳಾರಿ  ಜಿಲ್ಲೆಯ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಮಗನ ಮದುವೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಹರಪನಹಲ್ಲಿ ತಹಸಿಲ್ದಾರ್ ಅವರಿಂದ ಖಾಸಗಿ ದೂರು ದಾಖಲು ಮಾಡಲು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ‌ಹೇಳಿದ್ದಾರೆ.

ಮದುವೆಯಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. 50  ಜನಕ್ಕೂ ಹೆಚ್ಚು ಜನರು ಪಾಲ್ಗೊಳ್ಳಬಾರದು ಎನ್ನುವ ನಿಯಮ ಇದೆ. ಅದೇ ಪ್ರಕಾರ ಅನುಮತಿಯನ್ನು ನೀಡಲಾಗಿತ್ತು.

ಆದರೆ ಮೇಲ್ನೋಟಕ್ಕೆ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೆಚ್ಚು ಜನರು ಬಂದಿರೋದು ಗೊತ್ತಾಗಿದೆ. ನ್ಯಾಯಲಯದ ಅನುಮತಿ ಬಳಿಕ ಶಾಸಕರ ವಿರುದ್ದ ಖಾಸಗಿ ದೂರಿನ‌ ಬಗ್ಗೆ ಎಫ್ ಐಆರ್ ದಾಖಲಾಗುತ್ತದೆ. ಅನುಮತಿ ಪಡೆಯೋ ಕ್ರಮ ಪ್ರಗತಿಯಲ್ಲಿದೆ ಎಂದು‌ ಹೇಳಿದ್ದಾರೆ.

ಮದುವೆಯ ನಿಯಮದ ಬಗ್ಗೆ ಶಾಸಕರಿಗೆ ನಾನೇ  ಖುದ್ದಾಗಿ ಹೇಳಿದ್ದೇನೆ ಎಸಿ, ಪೊಲೀಸರು ಕೂಡ ಹೇಳಿದ್ದಾರೆ. ಆದರೂ  ಉಲ್ಲಂಘನೆಯಾಗಿದೆ ಎಂದ ಅವರು, ಮದುಮಗಳು ಆಂಧ್ರದವದರಾದ‌ ಹಿನ್ನಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆಯಾಗಿದೆಯಾ ಎಂದು ಚೆಕ್ ಮಾಡುತ್ತಿದ್ದೇವೆ. ಎಫ್ ಐಆರ್ ದಾಖಲಾದ ಬಳಿಕ ಪ್ರಕರದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತದೆಂದು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ