ಕೊಲೆಯಾದವನ ವಿರುದ್ಧ ಕೊಲೆಯತ್ನ ಕೇಸ್ ದಾಖಲು
 
	
		
			 
										    		ಬುಧವಾರ,  27 ಮೇ 2020 (21:09 IST)
	    		     
	 
 
				
											ಮದ್ಯದ ನಶೆಯಲ್ಲಿ ಕಾಲೋನಿಯ ಜನರೊಂದಿಗೆ ಜಗಳ ತೆಗೆದ ವ್ಯಕ್ತಿಯೊಬ್ಬ ಕೊಲೆಗೀಡಾಗಿದ್ದಾನೆ.
									
				
											
ಕಲಬುರಗಿ ನಗರದ ಸೋನಿಯಾಗಾಂಧಿ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಖಾಜಾಮಿಯಾ ಬೇಕ್ರಿವಾಲೆ (62) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
									
				
											ಎಣ್ಣೆ ಗುಂಗಿನಲ್ಲಿದ್ದ ಖಾಜಾಮಿಯಾ, ಶಾರುಖ್, ಶಹನವಾಜ್, ಸೈಯದ್ ಅಬ್ಬಾಸ್, ಸಿಖಂದರ್, ತಾಜುದ್ದೀನ್ ಇವರೆಲ್ಲರ ಜೊತೆಗೆ ಜಗಳ ತೆಗೆದಿದ್ದಾನೆ. ಅಲ್ಲದೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ.
									
				
											ಪ್ರತಿಯಾಗಿ ಎಲ್ಲರೂ ಸೇರಿ ಖಾಜಾಮಿಯಾನ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ಸೇರಿಸುವ ಮಾರ್ಗ ನಡುವೆ ಆತ ಸಾವನ್ನಪ್ಪಿದ್ದಾನೆ.
									
				
											ಕೊಲೆಯಾದವನ ವಿರುದ್ಧ ಕೊಲೆಯತ್ನ ಹಾಗೂ ಆರೋಪಿಗಳ ವಿರುದ್ಧ ಕೊಲೆ ಕೇಸ್ ದಾಖಲು ಮಾಡಲಾಗಿದೆ.
									
  
	
	
   
	
   
		
		
		