ಉಪ ಚುನಾವಣೆಗೂ ಮುನ್ನ ಮಂಡ್ಯದಲ್ಲಿ ಬಿತ್ತು ಯುವಕನ ಹೆಣ

ಶುಕ್ರವಾರ, 15 ನವೆಂಬರ್ 2019 (15:37 IST)
ಲವ್ ಮಾಡಿದ ಯುವತಿಯೊಂದಿಗೆ ಪರಾರಿಯಾಗಿದ್ದ ಯುವಕ ಕೊಲೆಯಾಗಿದ್ದಾನೆ.

ಯುವಕ ಮಂಜು ಹಾಗೂ ಅರ್ಚನರಾಣಿ ಎಂಬುವರು ಪರಸ್ಪರ ಲವ್ ಮಾಡ್ತಿದ್ರು. ಆದರೆ ಹುಡುಗಿ ಮನೆಯಲ್ಲಿ ಅರ್ಚನಾಳನ್ನು ಬೇರೆ ಹುಡುಗನೊಂದಿಗೆ ಎಂಗೇಜ್ ಮೆಂಟ್ ಮಾಡಿದ್ರು.

ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಮನೆ ಬಿಟ್ಟ ಅರ್ಚನಾರಾಣಿ ತನ್ನ ಲವರ್ ಮಂಜು ಜೊತೆ ಓಡಿಹೋಗಿ ಮದುವೆಯಾಗಿದ್ದಳು.

ಇದೀಗ ಮಂಜುವಿನ ಹೆಣ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದು, ಮಂಡ್ಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ