ವಿದ್ಯುತ್ ವ್ಯತ್ಯಯದ ವಿರುದ್ದ ಕಿಡಿಕಾರಿದ ಬಿಎಸ್ ವೈ

ಸೋಮವಾರ, 16 ಅಕ್ಟೋಬರ್ 2023 (14:21 IST)
ಎಲ್ಲ ಕಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ.ರೈತರು ಸಂಕಷ್ಟಕ್ಕೆ ಗುರಿಯಾಗಿದಾರೆ.ಒಂದು ಕಡೆ ಬರಗಾಲ.ರೈತರಿಗೆ ವಿದ್ಯುತ್ ಸಮಸ್ಯೆ ಆಗದಂತೆ ಸರ್ಕಾರ ನೋಡಿಕೊಳ್ಳಲಿ.ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ.ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿಗಳು ನಿಂತಿವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.
 
ಇನ್ನೂ ಬೆಂಗಳೂರಲ್ಲಿ ಐಟಿ ದಾಳಿ ವಿಚಾರವಾಗಿ ಐಟಿ ದಾಳಿಯಲ್ಲಿ ಹಣ ಸಿಕ್ಕಿರೋದು ಯಾರದ್ದು ಅಂತ ತನಿಖೆ ನಂತರ ಗೊತ್ತಾಗುತ್ತೆ.ಕಾಂಗ್ರೆಸ್ ನವ್ರು ಚುನಾವಣೆಗೆ ಹಣ ಸಂಗ್ರಹ ಮಾಡ್ತಿದ್ದಾರೆ  ಅಂತ ಖುದ್ದು ಪ್ರಹ್ಲಾದ್ ಜೋಷಿ ಆರೋಪ ಮಾಡಿದ್ದಾರೆ.ಈ ಸರ್ಕಾರ, ಹಣ ಸಂಗ್ರಹ ಮಾಡ್ತಿದೆ, ಅಭಿವೃದ್ಧಿ ಕಡೆ ಗಮನ ಕೊಡ್ತಿಲ್ಲ.ಇದನ್ನು ನಾನು ಖಂಡಿಸ್ತೇನೆ, ಸರ್ಕಾರ ಅಭಿವೃದ್ಧಿ ಕಡೆ ಗಮನ ಕೊಡಲಿ.ಇ ಡಿ ಯವರು ತನಿಖೆ ಮಾಡಬೇಕು ಅಂತ ಎಲ್ಲರೂ ಆಗ್ರಹ ಮಾಡ್ತಿದಾರೆ.ನಾನು ಕೂಡಾ ಅದೇ ಆಗ್ರಹ ಮಾಡ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ