ದೀಪಾವಳಿ ಮೊದಲ ದಿನದ ವಿಶೇಷತೆಯೇನು?

ಭಾನುವಾರ, 12 ನವೆಂಬರ್ 2023 (09:10 IST)
File photo
ಬೆಂಗಳೂರು: ಇಂದಿನಿಂದ ಮೂರು ದಿನ ದೇಶದಾದ್ಯಂತ್ಯ ದೀಪಾವಳಿ ಹಬ್ಬದ ಸಡಗರ. ಬೆಳಕಿನ ಹಬ್ಬದ ಮೊದಲ ದಿನವಾದ ಇಂದಿನ ದಿನದ ವಿಶೇಷತೆಯೇನು?

ಇಂದು ದೀಪಾವಳಿಯ ಮೊದಲ ದಿನವಾಗಿದ್ದು, ಮಕ್ಕಳ ಹಬ್ಬ ಎಂದೂ ಕರೆಯಲಾಗುತ್ತದೆ. ಇಂದು ಮೊದಲ ದಿನ ಮನೆ, ಅಂಗಳ ಸುತ್ತಮುತ್ತ ಶುಚಿಗೊಳಿಸಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತದೆ.

ಜೊತೆಗೆ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಹಬ್ಬದ ಅಡುಗೆ ಮಾಡಲಾಗುತ್ತದೆ. ಸಂಜೆ ಹೊತ್ತು ಮನೆಯ ಮುಂಭಾಗ ದೀಪ ಹಚ್ಚಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಇಂದು ಲಕ್ಷ್ಮೀ ದೇವಿಯ ಆರಾಧನೆಯೇ ಮುಖ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ