ಕೆಸರಿನಲ್ಲಿ ಹೂತುಕೊಂಡಿದ್ದ ಶ್ರೀಕಂಠೇಶ್ವರನ ರಥದ ಚಕ್ರ

ಶುಕ್ರವಾರ, 7 ಏಪ್ರಿಲ್ 2017 (09:29 IST)
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇವತ್ತು ಶ್ರೀಕಂಠೇಶ್ವರನ ರಥೋತ್ಸವ ನಡೆಯುತ್ತಿದೆ. ರಥ ಸಂಚರಿಸುತ್ತಿದ್ದ ವೇಳೆ ಅಂಗಡಿ ಬೀಡದಿಯ ಕೆಸರಿನಲ್ಲಿ ರಥ ಸಿಲುಕಿಕೊಂಡಿತ್ತು. ಒಂದು ಗಂಟೆ ಹರಸಾಹಸ ಪಟ್ಟ ಬಳಿಕ ಜೆಸಿಬಿ, ಕ್ರೇನ್ ಬಳಸಿ ರಥದ ಚಕ್ರವನ್ನ ಮೇಲೆತ್ತಲಾಗಿದೆ.
.

ಪ್ರತೀ ವರ್ಷದಂತೆ ಈ ವರ್ಷವೂ ರಥೋತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಾರೆ. ರಾತ್ರಿ ಮಳೆ ಬಿದ್ದ ಪರಿಣಾಮ ರಸ್ತೆಯೆಲ್ಲ ಕೆಸರಾಗಿತ್ತು. ರಥ ಬರುತ್ತಿದ್ದಂತೆ ಮಣ್ಣಿನಲ್ಲಿ ಹೂತುಹೋಗಿತ್ತು.

ಶ್ರೀಕಂಠೇಶ್ವರ ರಥದ ಜೊತೆ ಪಾರ್ವತಿದೇವಿಯ ರಥ ಸೇರಿ 5 ರಥೋತ್ಸವ ನಡೆಯುತ್ತಿದೆ. 

ವೆಬ್ದುನಿಯಾವನ್ನು ಓದಿ