ಅದ್ದೂರಿಯಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ

ಸೋಮವಾರ, 24 ಡಿಸೆಂಬರ್ 2018 (17:14 IST)
ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ಅದ್ದೂರಿಯಾಗಿ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಲ್ಯಾಣೋತ್ಸವ ನಡೆದಿದೆ.
ಕಾರ್ಯಕ್ರಮದಲ್ಲಿ ಮೈಸೂರು ಒಡೆಯರ್ ಯದುವಿರ್ ಹಾಗೂ ಉಡುಪಿಯ ಪೇಜಾವರ ಶ್ರೀಗಳು ಭಾಗಿಯಾಗಿದ್ದರು.

ತಿರುಪತಿಯ ಪುರೋಹಿತರಿಂದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯ ನೆರವೇರಿತು. ಸುಮಾರು 50 ಕ್ಕೂ ಹೆಚ್ಚು ಪುರೋಹಿತರಿಂದ ಪೂಜಾ ಕಾರ್ಯಗಳು ನೆರವೇರಿದವು. ಕ್ರೀಡಾಂಗಣದಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತಧಿಗಳು ಭಾಗಿಯಾಗಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ