ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ

ಸೋಮವಾರ, 8 ಮೇ 2023 (16:50 IST)
ಎಸ್ ಎಸ್ ಎಲ್ ಸಿ ಫಲಿತಾಂಶದ ಸುದ್ದಿಗೋಷ್ಠಿ ಆರಂಭವಾಗಿದ್ದು,ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ರಿಂದ ಸುದ್ದಿಗೋಷ್ಠಿ ನಡೆದಿದೆ.2023ರ Sslc ಫಲಿತಾಂಶ ಪ್ರಕಟವಾಗಿದೆ.ಈ ಬಾರಿ sslcಯಲ್ಲಿ  % 83.89 ಫಲಿತಾಂಶ ದಾಖಲಾಗಿದ್ದು,ಈ ಭಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಈ ಭಾರಿ 4ವಿಧ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.ಸರ್ಕಾರಿ ಶಾಲೆಯಲ್ಲಿ 86.74ಫಲಿತಾಂಶ ದಾಖಲಾಗಿದೆ.ಯಾವುದೇ ಸರ್ಕಾರಿ‌ ಶಾಲೆ ಯಲ್ಲಿ ಶೂನ್ಯ ಫಲಿತಾಂಶ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಲಾಗಿದೆ.
 
SSLC ಫಲಿತಾಂಶ ದಲ್ಲೂ ಹೆಣ್ಣು ಮಕ್ಕಳೇ ಮೇಲು ಗೈ.425968 ಗಂಡು ಮಕ್ಕಳಲ್ಲಿ 341108 ರಷ್ಟು ತೇರ್ಗಡೆಯಾಗಿದ್ದಾರೆ.ಗಂಡು ಮಕ್ಕಳು 80 % ತೇರ್ಗಡೆಯಾಗಿದ್ದಾರೆ.409134 ಹೆಣ್ಣು ಮಕ್ಕಳಲ್ಲಿ 359511 ತೇರ್ಗಡೆಯಾಗಿದ್ದಾರೆ.ಹೆಣ್ಣಮಕ್ಕಳು ಶೇ 87.87 ತೇರ್ಗಡೆಯಾಗಿದ್ದಾರೆ.ಈ ಬಾರಿ ಎಸ್ ಎಸ್‌ ಎಲ್ ಸಿ ಫಲಿತಾಂಶದಲ್ಲಿ ಚಿತ್ರದುರ್ಗ  ಪ್ರಥಮ ಸ್ಥಾನ 96.80 ರಷ್ಟು,ಎರಡನೇ ಸ್ಥಾನ ಮಂಡ್ಯ 96. 74 ರಷ್ಟು ಮೂರನೇ ಸ್ಥಾನ ಹಾಸನ 96.060 ರಷ್ಟು ,ಕೊನೆಯ ಸ್ಥಾನ ಯಾದಗಿರಿ ಪಡೆದುಕೊಂಡಿದೆ.
 
ಶೇಕಡಾ 100% ಫಲಿತಾಂಶ  ನಾಲ್ಕು ವಿದ್ಯಾರ್ಥಿಗಳು ಪಡೆದಿದ್ದಾರೆ.ಭೂಮಿಕಾ ಫೈ ನ್ಯೂ ಮೆಟಾಲಿಕ್ ಇಂಗ್ಲಿಷ್ ಹೈ ಸ್ಕೂಲ್ ಹೊಸೂರು ರಸ್ತೆ ಬೆಂಗಳೂರು,ಯಶಸ್ ಗೌಡ ಶ್ರೀ ‌ಬಾಗಂಗಾಧರ ನಾಥ ಶಾಲೆ ಚಿಕ್ಕಬಳ್ಳಾಪುರ,ಅನುಪಮ ಶ್ರೀ ಶೈಲ್ ಕೆರೆ ಹೋಲಿ ಹೈ ಸ್ಕೂಲ್ ಸವದತ್ತಿ ,ಭೀಮನ ಗೌಡ ಬಿರಾಧರ್ ಪಾಟೀಲ್  - ಆಕ್ಸ್ ಪಡ್೯ ಇಂಗ್ಲಿಷ್ ಮೀಡಿಯಾ ಸ್ಕೂಲ್  ವಿಜಯಪುರ ವಿದ್ಯಾರ್ಥಿಗಳು 100 ರಷ್ಟು ಫಲಿತಾಂಶ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ