ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆದಿದ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಮಧ್ಯಾಹ್ನ 12.30ಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ನಂತರ ವೆಬ್ ಸೈಟ್‌ನಲ್ಲಿ ರಿಸಲ್ಟ್ ಲಭ್ಯವಾಗಲಿದೆ.ಜೊತೆಗೆ ಆಯಾ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳುವುದಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪೋನ್ ನಂಬರ್ ಗಳಿಗೆ ಎಸ್ ಎಂಎಸ್ ಮೂಲಕ ಫಲಿತಾಂಶ ಕಳಿಸಲಾಗುತ್ತದೆ.
ಈ ಬಾರಿ ರಾಜ್ಯದ ಒಟ್ಟು 15,387 ಶಾಲೆಗಳಲ್ಲಿನ 8.73 ಲಕ್ಷ ವಿದ್ಯಾರ್ಥಿಗಳು 3.446 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 63, 796 ಶಿಕ್ಷಕರು ಭಾಗಿಯಾಗಿದ್ರು. ಪ್ರೌಢ ಶಿಕ್ಷಣ ಮಂಡಳಿಯ https://karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.