ನೀಟ್ ಪರೀಕ್ಷೆಗೂ ಮುನ್ನಾ ಜನಿವಾರ ಕಳಚಿದ ಸಿಬ್ಬಂದಿ, ಭಾರೀ ಆಕ್ರೋಶ
ಶ್ರೀಪಾದ್ ಪಾಟೀಲ್ ಎಂಬ ಅಭ್ಯರ್ಥಿಯಲ್ಲಿ ಪರೀಕ್ಷೆಗೂ ಮೊದಲು ಅವರ ಜನಿವಾರವನ್ನು ತೆಗೆಯುವಂತೆ ಹೇಳಲಾಯಿತು. ಈ ಘಟನೆ ಬಳಿಕ ಪ್ರತಿಭಟನೆ ನಡೆಸಲಾಯಿತು.
ಇದಕ್ಕೆ ಪ್ರತಿಯಾಗಿ, ಸಮುದಾಯದ ದೊಡ್ಡ ಗುಂಪು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಧರಣಿ ನಡೆಸಿತು. ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುತ್ತಿದ್ದಾರೆ ಮತ್ತು ಸರ್ಕಾರದ ಸ್ವಂತ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.